ADVERTISEMENT

ಬ್ಯಾಸ್ಕೆಟ್‌ಬಾಲ್‌: ಎಸ್‌. ಬ್ಲೂಸ್‌ ಸೆಮಿಗೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 16:17 IST
Last Updated 19 ಜುಲೈ 2023, 16:17 IST

ಬೆಂಗಳೂರು: ಶಿವಾಂಕ್‌ ತಿವಾರಿ (26) ಅವರ ಆಟದ ನೆರವಿನಿಂದ ಎಸ್‌.ಬ್ಲೂಸ್‌ ತಂಡವು 13 ವರ್ಷದೊಳಗಿನವರ ರಾಜ್ಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಎಚ್‌ಬಿಆರ್‌ ಬಿ.ಸಿ ತಂಡವನ್ನು 62–51ರಿಂದ ಮಣಿಸಿ, ಸೆಮಿಫೈನಲ್‌ ಪ್ರವೇಶಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಬಾಲಕರ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆದವು. ಎಂಸಿಎಚ್‌ಎಸ್‌ ತಂಡವು ಎಂಎನ್‌ಕೆ ರಾವ್‌ ಪಾರ್ಕ್‌ ತಂಡವನ್ನು 45–40ರಿಂದ, ವಿಮಾನಪುರ ಎಸ್‌.ಸಿ ತಂಡವು ಕೋರಮಂಗಲ ಎಸ್‌.ಸಿ ತಂಡವನ್ನು 41–20ರಿಂದ, ಯಂಗ್‌ ಓರಿಯನ್ಸ್‌ ತಂಡವು ಬೀಗಲ್ಸ್‌ ಬಿ.ಸಿ ತಂಡವನ್ನು 40–27ರಿಂದ ಮಣಿಸಿ, ನಾಲ್ವರ ಘಟ್ಟಕ್ಕೆ ಲಗ್ಗೆ ಹಾಕಿದವು.

‌ಬಾಲಕಿಯರ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಆಲ್‌ ಸ್ಟಾರ್‌ ಅಕಾಡೆಮಿ ಮೈಸೂರು ತಂಡವು ಎಂಸಿಎಚ್‌ಎಸ್‌ ತಂಡವನ್ನು 42–27ರಿಂದ, ಅಪ್ಪಯ್ಯ ಬಿ.ಸಿ ತಂಡವು ಬೀಗಲ್ಸ್‌ ಬಿ.ಸಿ ತಂಡವನ್ನು 23–16ರಿಂದ, ಯಂಗ್‌ ಓರಿಯನ್ಸ್‌ ಎಸ್‌.ಸಿ ತಂಡವು ಪಿಪಿಸಿ ತಂಡವನ್ನು 30–27ರಿಂದ ಮತ್ತು ಎಸ್‌.ಬ್ಲೂಸ್‌ ತಂಡವು ವೈಎಂಎಂಎ ತಂಡವನ್ನು 42–07ರಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶ ಪಡೆದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.