ADVERTISEMENT

ಬ್ಯಾಸ್ಕೆಟ್‌ಬಾಲ್‌: ಮೈಸೂರು ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 16:03 IST
Last Updated 6 ಜೂನ್ 2025, 16:03 IST
<div class="paragraphs"><p>ಬೀಗಲ್ಸ್‌ ತಂಡದ ಪೂರ್ವಿ (ಎಡ) ಮತ್ತು ಮೌಂಟ್ಸ್‌ ಕ್ಲಬ್‌ ತಂಡದ ನೀಲಯ್ಯ ಚೆಂಡಿಗಾಗಿ ಸೆಣಸಾಟ ನಡೆಸಿದರು –</p></div>

ಬೀಗಲ್ಸ್‌ ತಂಡದ ಪೂರ್ವಿ (ಎಡ) ಮತ್ತು ಮೌಂಟ್ಸ್‌ ಕ್ಲಬ್‌ ತಂಡದ ನೀಲಯ್ಯ ಚೆಂಡಿಗಾಗಿ ಸೆಣಸಾಟ ನಡೆಸಿದರು –

   

ಪ್ರಜಾವಾಣಿ ಚಿತ್ರ:ಎಸ್‌.ಕೆ.ದಿನೇಶ್‌

ಬೆಂಗಳೂರು: ಸುಮನ್‌ ಮತ್ತು ರೋನಕ್‌ ಅವರ ಆಟದ ಬಲದಿಂದ ಮೈಸೂರು ಜಿಲ್ಲೆ ಎ ತಂಡವು ಶುಕ್ರವಾರ ಡಿ.ಎನ್. ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ 64–62ರಿಂದ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವನ್ನು ಮಣಿಸಿತು.

ADVERTISEMENT

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ನಡೆದ ಸೂಪರ್‌ ಲೀಗ್‌ ಹಂತದ ಪಂದ್ಯದಲ್ಲಿ ವಿರಾಮದ ವೇಳೆಗೆ ಎಂಟು ಅಂಕಗಳ (34–26) ಮುನ್ನಡೆ ಪಡೆದಿದ್ದ ಮೈಸೂರು ತಂಡವು ಕೊನೆಯಲ್ಲಿ ಎರಡು ಅಂಕಗಳಿಂದ ರೋಚಕ ಗೆಲುವು ಸಾಧಿಸಿತು. ಸುಮನ್‌ ಮತ್ತು ರೋನಕ್‌ ಕ್ರಮವಾಗಿ 21 ಮತ್ತು 18 ಅಂಕ ಗಳಿಸಿದರು. ವ್ಯಾನ್ಗಾರ್ಡ್ಸ್ ತಂಡದ ಕೀರ್ತಿಕೃಷ್ಣ 21 ಮತ್ತು ಅನಿರುದ್ಧ್ 16 ಪಾಯಿಂಟ್ಸ್‌ ಕಲೆ ಹಾಕಿದರು.

ಫಲಿತಾಂಶ: ಸೂಪರ್‌ ಲೀಗ್‌ ಹಂತ: ಬಾಲಕರು: ಬೆಂಗಳೂರು ವ್ಯಾನ್ಗಾರ್ಡ್ಸ್ 63–28ರಿಂದ ಎಂಸಿಎಚ್‌ಎಸ್‌ ವಿರುದ್ಧ; ಡಿವೈಇಎಸ್‌ ಬೆಂಗಳೂರು 62–37ರಿಂದ ದಕ್ಷಿಣ ಕನ್ನಡ ಜಿಲ್ಲೆ ವಿರುದ್ಧ; ಎಚ್‌ಬಿಆರ್‌ ಬಿ.ಸಿ 58–44ರಿಂದ ರಾಜ್‌ಮಹಲ್‌ ಬಿ.ಸಿ ವಿರುದ್ಧ; ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ 73–64ರಿಂದ ಯಂಗ್‌ ಓರಿಯನ್ಸ್‌ ಎಸ್‌.ಸಿ ವಿರುದ್ಧ; ಮೈಸೂರು ಜಿಲ್ಲೆ ಎ 64–62ರಿಂದ ಬೆಂಗಳೂರು ವ್ಯಾನ್ಗಾರ್ಡ್ಸ್ ವಿರುದ್ಧ ಜಯ ಸಾಧಿಸಿತು. 

ಬಾಲಕಿರು: ಮೌಂಟ್ಸ್‌ ಕ್ಲಬ್‌ 67–63ರಿಂದ ಬೀಗಲ್ಸ್‌ ಬಿ.ಸಿ ಎದುರು; ಸದರ್ನ್‌ ಬ್ಲೂಸ್‌ 63–57ರಿಂದ ವಿಜಯಪುರ ಜಿಲ್ಲೆ ಎದುರು; ಮಂಡ್ಯ ಜಿಲ್ಲೆ 54–46ರಿಂದ ವಿವೇಕ್ಸ್‌ ಎಸ್‌.ಸಿ ಎದುರು; ರಾಜ್‌ಮಹಲ್ ಬಿ.ಸಿ 31–29ರಿಂದ ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ ಎದುರು ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.