ADVERTISEMENT

ಬ್ಯಾಸ್ಕೆಟ್‌ಬಾಲ್‌: ಸುರಾನ ಕಾಲೇಜಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 17:33 IST
Last Updated 6 ಫೆಬ್ರುವರಿ 2019, 17:33 IST

ಬೆಂಗಳೂರು: ದ್ವಿತೀಯಾರ್ಧದಲ್ಲಿ ಗುಣಮಟ್ಟದ ಆಟ ಆಡಿದ ಸುರಾನ ಕಾಲೇಜು ಬಾಲಕರ ತಂಡದವರು ಜಯನಗರದ ನ್ಯಾಷನಲ್‌ ಕಾಲೇಜು ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಬುಧವಾರ ನಡೆದ ಫೈನಲ್‌ನಲ್ಲಿ ಸುರಾನ ಕಾಲೇಜು 74–35 ಪಾಯಿಂಟ್ಸ್‌ನಿಂದ ನ್ಯೂ ಹೊರೈಜನ್‌ ಕಾಲೇಜು ತಂಡವನ್ನು ಪರಾಭವಗೊಳಿಸಿತು.

ವಿಜಯೀ ತಂಡದ ವಿನೋದ್‌ ಕುಮಾರ್‌, ತೇಜಸ್‌ ಮತ್ತು ಅಕ್ಷಯ್‌ ಕುಮಾರ್‌ ಅವರು ಕ್ರಮವಾಗಿ 15, 12 ಹಾಗೂ 20 ಪಾಯಿಂಟ್ಸ್‌ ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.