ADVERTISEMENT

ಬ್ಯಾಸ್ಕೆಟ್‌ಬಾಲ್‌: ಬೆಂಗಳೂರು ತಂಡಗಳಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 27 ಮೇ 2022, 16:26 IST
Last Updated 27 ಮೇ 2022, 16:26 IST
ಬೆಂಗಳೂರು ದಕ್ಷಿಣ ತಂಡದ ಪ್ರಿಯಾಂಕ ಅವರನ್ನು ತಡೆಯಲು ಪ್ರಯತ್ನಿಸಿದ ಚೆನ್ನೈ ಎಗ್ಮೋರ್‌ನ ಕಲ್ಪಿತ ಪಾರ್ಥಸಾರಥಿ –ಪ್ರಜಾವಾಣಿ ಚಿತ್ರ/ಬಿ.ಎಚ್.ಶಿವಕುಮಾರ್
ಬೆಂಗಳೂರು ದಕ್ಷಿಣ ತಂಡದ ಪ್ರಿಯಾಂಕ ಅವರನ್ನು ತಡೆಯಲು ಪ್ರಯತ್ನಿಸಿದ ಚೆನ್ನೈ ಎಗ್ಮೋರ್‌ನ ಕಲ್ಪಿತ ಪಾರ್ಥಸಾರಥಿ –ಪ್ರಜಾವಾಣಿ ಚಿತ್ರ/ಬಿ.ಎಚ್.ಶಿವಕುಮಾರ್   

ಬೆಂಗಳೂರು: ಸ್ಥಳೀಯ ಪ್ರೇಕ್ಷಕರ ಸಂಭ್ರಮದ ನಡುವೆ ಬೆಂಗಳೂರು ಪುರುಷರ ಮತ್ತು ಮಹಿಳೆಯರ ತಂಡಗಳು ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಆಯೋಜಿಸಿರುವ ಐಎನ್‌ಬಿಎಲ್ 3x3ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ಸ್‌ನ ಮೊದಲ ದಿನ ಜಯಭೇರಿ ಮೊಳಗಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪುರುಷರ ‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ತಂಡ 21–16ರಲ್ಲಿ ಕೋಲ್ಕತ್ತವನ್ನು ಮಣಿಸಿತು. ಮಹಿಳೆಯರ ‘ಇ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ತಂಡ 7–14ರಲ್ಲಿ ಭಾವನಗರ ತಂಡಕ್ಕೆ ಮಣಿಯಿತು.

18 ವರ್ಷದೊಳಗಿನ ಪುರುಷರ ‘ಎ’ ಗುಂಪಿನ ಹಣಾಯಣಿಯಲ್ಲಿ ಕೊಚ್ಚಿ ವಿರುದ್ಧ ಬೆಂಗಳೂರು 19–14ರಲ್ಲಿ ಜಯ ಗಳಿಸಿತು. ಮತ್ತೊಂದು ಪಂದ್ಯದಲ್ಲಿ ಪುದುಚೇರಿಯನ್ನು 19–11ರಲ್ಲಿ ಗೆದ್ದಿತು. 18 ವರ್ಷದೊಳಗಿನ ಮಹಿಳೆಯರ ‘ಬಿ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಪೂರ್ವ ತಂಡ ಗುವಾಹಟಿ ವಿರುದ್ಧ 13–8ರಲ್ಲಿ ಜಯ ಗಳಿಸಿತು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು 12–5ರಲ್ಲಿ ಬೆಂಗಳೂರು ಪೂರ್ವ ತಂಡ ಸೋಲಿಸಿತು. ‘ಇ’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ದಕ್ಷಿಣ 11–10ರಲ್ಲಿ ಚೆನ್ನೈ ಇಗ್ಮೋರ್ ತಂಡವನ್ನು ಮಣಿಸಿತು. ಮತ್ತೊಂದು ಹಣಾಹಣಿಯಲ್ಲಿ ಪಣಜಿಯನ್ನು 12–11ರಲ್ಲಿ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.