ADVERTISEMENT

ಕೆನಡಾ 3x3 ಬ್ಯಾಸ್ಕೆಟ್‌ಬಾಲ್‌ ತಂಡದಲ್ಲಿ ಬಿಕ್ರಂಜೀತ್ ಸಿಂಗ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 14:34 IST
Last Updated 12 ನವೆಂಬರ್ 2021, 14:34 IST
ಬಿಕ್ರಂಜೀತ್ ಗಿಲ್
ಬಿಕ್ರಂಜೀತ್ ಗಿಲ್   

ಬೆಂಗಳೂರು: ತ್ರಿ ಬಿ ಲೀಗ್‌ನಲ್ಲಿ ಗಮನ ಸೆಳೆದಿರುವ ಪಂಜಾಬ್‌ನ ಬಿಕ್ರಂಜೀತ್ ಗಿಲ್ ಅವರು ’ಫಿಭಾ3x3 ಅಮೆರಿಕಪ್‌‘ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಆಡುವ ಕೆನಡಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಟೂರ್ನಿ ಅಮೆರಿಕದ ಮಿಯಾಮಿಯಲ್ಲಿ ನಡೆಯಲಿದೆ.

’ಬಿಕ್‘ ಎಂದೇ ಕರೆಯಲಾಗುವ, 6.7 ಅಡಿ ಎತ್ತರದ ಬಿಕ್ರಂಜೀತ್ ಗಿಲ್ 2019ರಲ್ಲಿ ಫಿಬಾ 3x3 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಆಡಿದ ತಂಡದಲ್ಲೂ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

’ರಾಷ್ಟ್ರೀಯ ತಂಡವೊಂದರಲ್ಲಿ ಸ್ಥಾನ ಗಳಿಸುವುದು ಸಂತೋಷದ ವಿಷಯ. ತ್ರಿ ಬಿ ಎಲ್‌ನಲ್ಲಿ ಅವಕಾಶ ಕೊಟ್ಟಿದ್ದರಿಂದ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ. ಈ ಲೀಗ್‌ನಲ್ಲಿ ಆಡಿದ್ದರಿಂದಾಗಿ ಫಿಬಾ ರ‍್ಯಾಂಕಿಂಗ್‌ನಲ್ಲಿ ಎತ್ತರಕ್ಕೇರಲು ಸಾಧ್ಯವಾಯಿತು.3x3 ಕ್ರೀಡೆಯ ಪರಿಣಿತ ಎಂದು ಕರೆಸಿಕೊಳ್ಳುವುದಕ್ಕೂ ಇದು ನೆರವಾಯಿತು‘ ಎಂದು ಬಿಕ್ರಂಜೀತ್ ಹೇಳಿದರು.

ADVERTISEMENT

ಟೂರ್ನಿಯಲ್ಲಿ ಕೆನಡಾ ತಂಡ ಎರಡನೇ ಶ್ರೇಯಾಂಕ ಹೊಂದಿದ್ದು ’ಬಿ‘ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಅರ್ಜೆಂಟೀನಾ ಕೂಡ ಇದೇ ಗುಂಪಿನಲ್ಲಿದ್ದು ಮತ್ತೊಂದು ತಂಡವನ್ನು ಅರ್ಹತಾ ಸುತ್ತಿನ ಪಂದ್ಯಗಳ ನಂತರ ನಿರ್ಧರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.