ADVERTISEMENT

ಜಿಎಸ್‌ ಟ್ರೋಫಿ: ಬಿಎಂಡಬ್ಲ್ಯು ಚಾಲಕರು ಭಾಗಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 15:41 IST
Last Updated 23 ನವೆಂಬರ್ 2021, 15:41 IST
ಜಿಎಸ್‌ ಟ್ರೋಫಿ ಬೆಂಗಳೂರು ಕ್ವಾಲಿಫೈಯರ್ಸ್‌ನಲ್ಲಿ ಪಾಲ್ಗೊಂಡ ಬಿಎಂಡಬ್ಲ್ಯು ಚಾಲಕರು
ಜಿಎಸ್‌ ಟ್ರೋಫಿ ಬೆಂಗಳೂರು ಕ್ವಾಲಿಫೈಯರ್ಸ್‌ನಲ್ಲಿ ಪಾಲ್ಗೊಂಡ ಬಿಎಂಡಬ್ಲ್ಯು ಚಾಲಕರು   

ಬೆಂಗಳೂರು: ಅಂತರಾಷ್ಟ್ರೀಯ ಜಿಎಸ್‌ ಟ್ರೋಫಿಗಾಗಿ ನಡೆದ ಬೆಂಗಳೂರು ಕ್ವಾಲಿಫೈಯರ್‌ನಲ್ಲಿ ಬಿಎಂಡಬ್ಲ್ಯು ಜಿಎಸ್‌ ಚಾಲಕರು ಪಾಲ್ಗೊಂಡರು. ಬೆಂಗಳೂರು ಕ್ವಾಲಿಫೈಯರ್ ಇತ್ತೀಚೆಗೆ ದೊಡ್ಡಮಲ್ಲೆಕೆರೆಯ ಟ್ರೈಲ್ ಮಾಸ್ಟರ್ ರಾಂಚ್‍ನಲ್ಲಿ ನಡೆಯಿತು. ಬಿಎಂಡಬ್ಲ್ಯು ಜಿಎಸ್‌ ಮಾಲೀಕರಿಗೆ ನೋಂದಣಿ ಮುಕ್ತವಾಗಿತ್ತು.

ದೆಹಲಿ, ಮುಂಬೈ, ಬೆಂಗಳೂರು ಮತ್ತು ಭುವನೇಶ್ವರಗಳಲ್ಲಿ ಕ್ವಾಲಿಫೈಯರ್‌ ಟೂರ್ನಿಗಳು ನಡೆಯಲಿವೆ. ಈ ಕ್ವಾಲಿಫೈಯರ್ಸ್ ಮೂಲಕ ರೈಡರ್ಸ್‌ಗಳನ್ನು ರಾಷ್ಟ್ರೀಯ ಅರ್ಹತಾ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಲಾಗುತ್ತದೆ. ಬಳಿಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಮೂರು ಸ್ಥಾನ ಪಡೆಯುವವರು ‘ರಾಷ್ಟ್ರೀಯ ತಂಡ‘ವನ್ನು ಪ್ರತಿನಿಧಿಸುವರು. ಈ ಮೂಲಕ ಆಯ್ಕೆಯಾದ ಭಾರತ ತಂಡವು 2022ರಲ್ಲಿ ಅಲ್ಬೇನಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸ್ಪರ್ಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT