ADVERTISEMENT

ಹಿರಿಯ ಬಾಕ್ಸರ್‌ ಡುರಾನ್‌ಗೆ ಕೋವಿಡ್‌

ಏಜೆನ್ಸೀಸ್
Published 26 ಜೂನ್ 2020, 8:53 IST
Last Updated 26 ಜೂನ್ 2020, 8:53 IST
ರಾಬರ್ಟೊ ಡುರಾನ್‌ –ಟ್ವಿಟರ್‌ ಚಿತ್ರ 
ರಾಬರ್ಟೊ ಡುರಾನ್‌ –ಟ್ವಿಟರ್‌ ಚಿತ್ರ    

ಪನಾಮ ಸಿಟಿ: ಪನಾಮದ ದಿಗ್ಗಜ ಬಾಕ್ಸರ್‌ ರಾಬರ್ಟೊ ಡುರಾನ್‌ಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.

ಈ ವಿಷಯವನ್ನು ರಾಬರ್ಟೊ ಅವರ ಮಗ ರಾಬಿನ್‌ ಡುರಾನ್‌ ಗುರುವಾರ ಬಹಿರಂಗಪಡಿಸಿದ್ದಾರೆ.

‘ಜ್ವರದ ಲಕ್ಷಣ ಕಂಡುಬಂದಿದ್ದರಿಂದ ನಮ್ಮ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ಖಾತರಿಯಾಗಿದೆ’ ಎಂದು ರಾಬಿನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

1968ರಲ್ಲಿ ಅಂತರರಾಷ್ಟ್ರೀಯ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಿದ್ದ ರಾಬರ್ಟೊ 2001ರಲ್ಲಿ ನಿವೃತ್ತರಾಗಿದ್ದರು.

69 ವರ್ಷ ವಯಸ್ಸಿನ ರಾಬರ್ಟೊ ಒಟ್ಟು 119 ಪಂದ್ಯಗಳಲ್ಲಿ ರಿಂಗ್‌ಗೆ ಇಳಿದಿದ್ದರು. ಈ ಪೈಕಿ 103ರಲ್ಲಿ ಗೆದ್ದಿದ್ದರು. ನಾಕೌಟ್‌ ಮೂಲಕವೇ 70 ಪಂದ್ಯಗಳನ್ನು ಜಯಿಸಿದ ಹಿರಿಮೆ ಅವರದ್ದಾಗಿದೆ.

ವಿಶ್ವ ಚಾಂಪಿಯನ್‌ಷಿಪ್‌ನಲೈಟ್‌ವೇಟ್‌, ವೆಲ್ಟರ್‌ವೇಟ್‌, ಲೈಟ್‌ ಮಿಡಲ್‌ವೇಟ್‌ ಹಾಗೂ ಮಿಡಲ್‌ವೇಟ್‌ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ಸಾಧನೆಯನ್ನೂ ಮಾಡಿದ್ದರು.

2001ರ ಅಕ್ಟೋಬರ್‌ನಲ್ಲಿ ಅರ್ಜೆಂಟೀನಾದಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಬರ್ಟೊ, ಅದಕ್ಕೂ ಮುನ್ನ ಮೂರು ಬಾರಿ ನಿವೃತ್ತಿ ಪ್ರಕಟಿಸಿದ್ದರು. ಬಳಿಕ ಈ ನಿರ್ಧಾರಗಳಿಂದ ಹಿಂದೆ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.