ADVERTISEMENT

ಬಾಕ್ಸಿಂಗ್‌: ಹರಿಯಾಣ, ರೈಲ್ವೇಸ್ ಪ್ರಾಬಲ್ಯ

ಪಿಟಿಐ
Published 4 ಜನವರಿ 2019, 17:37 IST
Last Updated 4 ಜನವರಿ 2019, 17:37 IST

ವಿಜಯನಗರ, ಬಳ್ಳಾರಿ ಜಿಲ್ಲೆ: ಅಮೋಘ ಸಾಮರ್ಥ್ಯ ಮೆರೆದ ಹರಿಯಾಣದ ಬಾಕ್ಸರ್‌ಗಳು ಇಲ್ಲಿ ನಡೆಯುತ್ತಿರುವ ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪ್ರವೇಶಿಸಿದರು. ರೈಲ್ವೇಸ್‌ ಮತ್ತು ಅಖಿಲ ಭಾರತ ಪೊಲೀಸ್‌ನ (ಎಐಪಿ) ಬಾಕ್ಸರ್‌ಗಳು ಕೂಡ ನಾಲ್ಕರ ಘಟ್ಟ ತಲುಪಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಲವ್ಲಿನಾ ಬೋರ್ಗೇನ್‌, ಪಿಂಕಿ ರಾಣಿ ಜಂಗ್ರಾ, ಸಿಮ್ರನ್‌ಜೀತ್ ಕೌರ್‌ ಹಾಗೂ ಸೀಮಾ ಪೂನಿಯಾ ಶುಕ್ರವಾರದ ತಮ್ಮ ಬೌಟ್‌ಗಳನ್ನು ಗೆದ್ದರು. ಹರಿಯಾಣದ ಮನೀಷಾ ಮೌನ್‌ (54 ಕೆಜಿ), ನೀರಜ್‌ (60 ಕೆಜಿ), ನಿಶಾ (69 ಕೆಜಿ), ನೂಪುರ್‌ (75 ಕೆಜಿ), ಪೂಜಾ ರಾಣಿ (81 ಕೆಜಿ) ಮತ್ತು ಅನುಪಮ (+81 ಕೆಜಿ) ಸೆಮಿಫೈನಲ್‌ ಪ್ರವೇಶಿಸಿದರು.

ರೈಲ್ವೆಯ ಪೂಜಾರ ಟೊಕಾಸ್‌ (48 ಕೆಜಿ), ಮೀನಾಕ್ಷಿ (51 ಕೆಜಿ), ಶಿಕ್ಷಾ (54 ಕೆಜಿ), ಸೋನಿಯಾ ಲಾಥರ್‌ (57 ಕೆಜಿ), ಪ್ವಿಲಾ ಬಸುಮತ್ರಿ (64 ಕೆಜಿ), ಪೂಜಾ (69 ಕೆಜಿ), ನೀತು (75 ಕೆಜಿ), ಭಗವತಿ ಕಚಾರಿ (81 ಕೆಜಿ) ಮತ್ತು ಸೀಮಾ ಪೂನಿಯಾ (+81 ಕೆಜಿ) ಎದುರಾಳಿಗಳನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.