ADVERTISEMENT

ಬಾಕ್ಸಿಂಗ್‌: ಭಾರತಕ್ಕೆ ಎರಡು ಪದಕ ಖಚಿತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 14:36 IST
Last Updated 3 ಆಗಸ್ಟ್ 2022, 14:36 IST
ಮೊಹಮ್ಮದ್‌ ಹುಸಾಮುದ್ದೀನ್‌ (ಬಲ) ಮತ್ತು ಟ್ರಯಾಗೈನ್‌ ಮಾರ್ನಿಂಗ್‌ ನಡುವಿನ ಪೈಪೋಟಿ –ಪಿಟಿಐ ಚಿತ್ರ
ಮೊಹಮ್ಮದ್‌ ಹುಸಾಮುದ್ದೀನ್‌ (ಬಲ) ಮತ್ತು ಟ್ರಯಾಗೈನ್‌ ಮಾರ್ನಿಂಗ್‌ ನಡುವಿನ ಪೈಪೋಟಿ –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್:ಭಾರತದ ಬಾಕ್ಸರ್‌ಗಳಾದ ಮೊಹಮ್ಮದ್‌ ಹುಸಾಮುದ್ದೀನ್‌ ಮತ್ತು ನೀತು ಗಂಗಾಸ್‌ ಅವರು ಸೆಮಿಫೈನಲ್‌ ಪ್ರವೇಶಿಸಿದ್ದು, ಎರಡು ಪದಕ ಖಚಿತಪಡಿಸಿಕೊಂಡಿದ್ದಾರೆ.

ಬುಧವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಹುಸಾಮುದ್ದೀನ್‌ 4–1 ರಲ್ಲಿ ನಮೀಬಿಯದ ಟ್ರಯಾಗೈನ್‌ ಮಾರ್ನಿಂಗ್‌ ಅವರನ್ನು ಮಣಿಸಿದರು.

28 ವರ್ಷದ ಹುಸಾಮುದ್ದೀನ್‌ ಪ್ರಬಲ ಪಂಚ್‌ಗಳ ಮೂಲಕ ಎದುರಾಳಿಯ ಮೇಲೆ ಸವಾರಿ ಮಾಡಿದರು. ಭಾರತದ ಬಾಕ್ಸರ್‌ ಕಳೆದ ಕಾಮನ್‌ವೆಲ್ತ್‌ ಕೂಟದಲ್ಲಿ ಕಂಚು ಜಯಿಸಿದ್ದರು.

ADVERTISEMENT

ನೀತು ಅವರು ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ನಾರ್ತರ್ನ್‌ ಐರ್ಲೆಂಡ್‌ನ ನಿಕೋಲ್ ಕ್ಲೈಡ್‌ ಎದುರು ಗೆದ್ದರು.

ಭಾರತದ ಇತರ ಬಾಕ್ಸರ್‌ಗಳಾದ ಲವ್ಲಿನಾ ಬೊರ್ಗೊಹೈನ್, ನಿಖರ್‌ ಜರೀನ್‌ ಮತ್ತು ಆಶಿಶ್‌ ಕುಮಾರ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.