ADVERTISEMENT

ಕಾಫಿಡೇ ಮಲ್ನಾಡ್ಅಲ್ಟ್ರಾ ಮ್ಯಾರಥಾನ್‌: ಮಲೆನಾಡ ಸಿರಿ ಕಣ್ತುಂಬಿಕೊಂಡ ಓಟಗಾರರು

ಮ್ಯಾರಥಾನ್‌ಗೆ ತೆರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 15:28 IST
Last Updated 14 ಅಕ್ಟೋಬರ್ 2018, 15:28 IST
110 ಕಿ.ಮೀ. ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಭಾರತದ ಕೊಜಿ ಬೆಪ್ಪು ಅವರಿಗೆ ಆಯೋಜಕರು ಪದಕ ನೀಡಿ ಅಭಿನಂದಿಸಿದರು.
110 ಕಿ.ಮೀ. ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಭಾರತದ ಕೊಜಿ ಬೆಪ್ಪು ಅವರಿಗೆ ಆಯೋಜಕರು ಪದಕ ನೀಡಿ ಅಭಿನಂದಿಸಿದರು.   

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಎರಡು ದಿನ ನಡೆದ ಕಾಫೀ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್‌ಗೆ ಭಾನುವಾರ ತೆರೆಬಿತ್ತು. ದೇಶ ವಿದೇಶಗಳ ಓಟಗಾರರು ಮಲೆನಾಡಿನ ಸೊಬಗನ್ನು ಕಣ್ತುಂಬಿಕೊಂಡರು.

ಮೂರನೇ ಬಾರಿಗೆ ನಡೆದ ಈ ಮ್ಯಾರಥಾನ್‌ನಲ್ಲಿ 811 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ಪೈಕಿ 143 ಮಹಿಳೆಯುರು ಇದ್ದರು. ವಿಶ್ವದರ್ಜೆಯ ಓಟಗಾರರು ಚಮತ್ಕಾರ ಪ್ರದರ್ಶಿಸಿದರು. ಕೆಮ್ಮಣ್ಣುಗುಂಡಿ ಭಾಗದ ಕಾಫಿಕಣಿವೆಯ ತೋಟಗಳ ನಿಸರ್ಗ ಸಿರಿ, ಗುಡ್ಡಗಾಡು, ತೊರೆಝರಿ, ಜೀವ ವೈವಿಧ್ಯಗಳನ್ನು ಆನಂದಿಸಿದರು.

‘ಮ್ಯಾರಥಾನ್ ಅನುಭವವನ್ನು ಪ್ರೇರಣಾತ್ಮಕವಾಗಿಯೂ ಸವಾಲಾಗಿಯೂ ಸ್ವೀಕರಿಸಿ ಓಟಗಾರರು ಖುಷಿಪಟ್ಟರು. ಮಲೆನಾಡಿನ ನೈಸರ್ಗಿಕ ಜೀವವೈವಿಧ್ಯವನ್ನು ಪರಿಚಯಿಸುವುದು ಕಾಫಿಡೇದ ಉದ್ದೇಶ. ಪರಿಸರ ಸ್ನೇಹಿಯಾಗಿ ಮ್ಯಾರಥಾನ್‌ ಆಯೋಜಿಸಲಾಗಿತ್ತು’ ಎಂದು ಕೆಫೆ ಕಾಫಿಡೇ ಸಂಶೋಧನೆ–ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪ್ರದೀಪ್ ಕೆಂಜಿಗೆ ಹೇಳಿದ್ದಾರೆ.

ADVERTISEMENT

ಕಾಫಿಡೇ ಮಲ್ನಾಡ್ ಅಲ್ಟ್ರಾ ಕಾರ್ಯಕ್ರಮ ನಿರ್ದೇಶಕ ಶ್ಯಾಂ ಸುಂದರ್ ಪಾಣಿ‘ ವರ್ಷದಿಂದ ವರ್ಷಕ್ಕೆ ಓಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇಲ್ಲಿನ ಪರಿಸರ ಅದ್ಭುತವಾಗಿದೆ. ಓಟಗಾರರಿಗೆ ವಿಭಿನ್ನ ಅನುಭವ ಆಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.