ಪ್ಯಾರಿಸ್: 2020ರ ಆವೃತ್ತಿಯ ಡಕಾರ್ ರ್ಯಾಲಿಯ ಮಾರ್ಗವನ್ನು ಬುಧವಾರ ಸಂಘಟಕರು ಇಲ್ಲಿ ಅನಾವರಣಗಳಿಸಿದ್ದಾರೆ. ಅರೇಬಿಯ ಮರುಭೂಮಿಯ ಮೂಲಕ ಸಾಗುವ 12 ದಿನಗಳ ಮ್ಯಾರಥಾನ್ ಜನವರಿ 5ರಂದು ಆರಂಭವಾಗಲಿದೆ.
ಎರಡು ಬಾರಿಯ ಫಾರ್ಮುಲಾ 1 ವಿಶ್ವ ಚಾಂಪಿಯನ್ ಫರ್ನಾಂಡೊ ಅಲಾನ್ಸೊ ಸೇರಿದಂತೆ ವಿಶ್ವದ 351 ರೇಸರ್ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವು ವರ್ಷಗಳಿಂದ ಲ್ಯಾಟಿನ್ ಅಮೆರಿಕಾದಲ್ಲಿ ನಡೆಯುತ್ತಿದ್ದ ರ್ಯಾಲಿಯು ಈಗ ಸೌದಿ ಅರೇಬಿಯದಲ್ಲಿ ಆಯೋಜಿತವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.