ADVERTISEMENT

ಬ್ಯಾಡ್ಮಿಂಟನ್‌: ಧ್ರುವ್‌ಗೆ ಸ್ಥಾನ

ಪಿಟಿಐ
Published 8 ಫೆಬ್ರುವರಿ 2023, 14:13 IST
Last Updated 8 ಫೆಬ್ರುವರಿ 2023, 14:13 IST
   

ನವದೆಹಲಿ: ಧ್ರುವ್‌ ಕಪಿಲಾ ಅವರು ಫೆ.14 ರಿಂದ 19ರ ವರೆಗೆ ದುಬೈನಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್‌ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಅವರು ಗಾಯಗೊಂಡಿರುವುದರಿಂದ ಬದಲಿ ಆಟಗಾರನಾಗಿ ಧ್ರುವ್‌ಗೆ ಅವಕಾಶ ಲಭಿಸಿದೆ. ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ ಜತೆಗೆ ಆಡಬೇಕಿದ್ದ ಸಾತ್ವಿಕ್‌, ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರಿಂದ ಕೂಟದಿಂದ ಹಿಂದೆ ಸರಿದಿದ್ದಾರೆ.

‘ಬಿ’ ಗುಂಪಿನಲ್ಲಿರುವ ಭಾರತ ತಂಡ, ತನ್ನ ಮೊದಲ ಪಂದ್ಯದಲ್ಲಿ ಫೆ.16 ರಂದು ಮಲೇಷ್ಯಾ ವಿರುದ್ಧ ಪೈಪೋಟಿ ನಡೆಸಲಿದೆ. ಯುಎಇ ಮತ್ತು ಕಜಕಸ್ತಾನ ಇದೇ ಗುಂಪಿನಲ್ಲಿವೆ.

ADVERTISEMENT

ಲಕ್ಷ್ಯ ಸೇನ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಪುರುಷರ ಸಿಂಗಲ್ಸ್‌ನಲ್ಲಿ ಹಾಗೂ ಪಿ.ವಿ.ಸಿಂಧು ಅವರು ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಗಾಯತ್ರಿ ಗೋಪಿಚಂದ್‌– ತ್ರಿಷಾ ಜೋಲಿ ಅವರು ಮಹಿಳೆಯರ ಡಬಲ್ಸ್‌ನಲ್ಲಿ ಹಾಗೂ ಇಶಾನ್‌ ಭಟ್ನಾಗರ್‌– ತನಿಷಾ ಕ್ರಾಸ್ತೊ ಮಿಶ್ರ ಡಬಲ್ಸ್‌ನಲ್ಲಿ ಆಡಲಿದ್ದಾರೆ.

ಹಾಲಿ ಚಾಂಪಿಯನ್‌ ಚೀನಾ ಒಳಗೊಂಡಂತೆ ಒಟ್ಟು 17 ತಂಡಗಳು ಕಣದಲ್ಲಿವೆ. ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿದ್ದು, ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.