ADVERTISEMENT

ಮಾಸ್ಟರ್ಸ್‌ ಕ್ರೀಡಾಕೂಟ: ಡಾ.ಸುನೀತಾಗೆ ನಾಲ್ಕು ಪದಕ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:41 IST
Last Updated 6 ಜೂನ್ 2025, 15:41 IST
ಡಾ.ಸುನೀತಾ ರಾಣಾ ಅಗರವಾಲ್
ಡಾ.ಸುನೀತಾ ರಾಣಾ ಅಗರವಾಲ್   

ಬೆಂಗಳೂರು: ಕರ್ನಾಟಕದ ಈಜುಪಟು ಡಾ.ಸುನೀತಾ ರಾಣಾ ಅಗರವಾಲ್ ಅವರು ತೈವಾನ್‌ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ಸುನೀತಾ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಅವರು ಮಹಿಳೆಯರ 50 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನ, 50 ಮೀ.  ಬ್ಯಾಕ್‌ಸ್ಟ್ರೋಕ್, 50 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಫ್ರೀಸ್ಟೈಲ್ ಈಜು ವಿಭಾಗಗಳಲ್ಲಿ ತಲಾ ಬೆಳ್ಳಿ ಪದಕ ಜಯಿಸಿದ್ದಾರೆ. 

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ವಿವಿಧ ರಾಷ್ಟ್ರಗಳಿಂದ 60,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.