ADVERTISEMENT

ಆನ್‌ಲೈನ್ ಜೂಜಾಟಕ್ಕೆ ಕಾಲಿಟ್ಟ ಇಎಸ್‌ಪಿಎನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2023, 10:42 IST
Last Updated 9 ಆಗಸ್ಟ್ 2023, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್: ಕ್ರೀಡಾ ಬ್ರಾಡ್‌ಕಾಸ್ಟ್ ದೈತ್ಯ ಇಎಸ್‌ಪಿಎನ್, ಆನ್‌ಲೈನ್ ಜೂಜಾಟ ರಂಗಕ್ಕೆ ಕಾಲಿಟ್ಟಿದ್ದು, ಕ್ಯಾಸಿನೊ ಕಂಪನಿಯಾದ ಪೆನ್ ಎಂಟರ್‌ಟೈನ್‌ಮೆಂಟ್‌ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಅಮೆರಿಕದ ಪ್ರೇಕ್ಷಕರಿಗೆ ಸ್ಪೋಟ್ಸ್‌ಬುಕ್ (ಬುಕ್ಕಿ) ಸೌಲಭ್ಯ ಒದಗಿಸಲಾಗುತ್ತಿದ್ದು, ಬರೋಬ್ಬರಿ ಎರಡು ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಪ್ಪಂದ ಏರ್ಪಟ್ಟಿದೆ.

ಇದನ್ನೂ ಓದಿ: ಆಳ-ಅಗಲ: ಕ್ಯಾಸಿನೊ ಮಾಯಾಲೋಕ

ADVERTISEMENT

ಇದಕ್ಕಾಗಿ 'ಇಎಸ್‌ಪಿಎನ್ ಬೆಟ್' ಎಂಬ ಹೊಸ ಬ್ರ್ಯಾಂಡ್‌ ಅನ್ನು ರಚಿಸಲಾಗಿದೆ. ಈ ಮೂಲಕ ಆನ್‌ಲೈನ್ ಜೂಜಾಟದ ಲಾಭದಾಯಕ ಜಗತ್ತಿಗೆ ಇಎಸ್‌ಪಿಎನ್ ಕಾಲಿಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಎಸ್‌ಪಿಎನ್ ಮುಖ್ಯಸ್ಥ ಜಿಮ್ಮಿ ಪಿಟಾರೊ, ಕ್ರೀಡಾಭಿಮಾನಿಗಳಿಗೆ ಗರಿಷ್ಠ ಮನರಂಜನೆ ಒದಗಿಸುವುದು ಮತ್ತು ಅತ್ಯುತ್ತಮ ಸೇವೆ ನೀಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.