ADVERTISEMENT

ಹ್ಯಾಮಿಲ್ಟನ್‌ಗೆ ಜನಾಂಗೀಯ ನಿಂದನೆ: ಖಂಡನೆ

ಏಜೆನ್ಸೀಸ್
Published 19 ಜುಲೈ 2021, 19:45 IST
Last Updated 19 ಜುಲೈ 2021, 19:45 IST
ಲೂಯಿಸ್ ಹ್ಯಾಮಿಲ್ಟನ್‌– ಎಎಫ್‌ಪಿ ಚಿತ್ರ
ಲೂಯಿಸ್ ಹ್ಯಾಮಿಲ್ಟನ್‌– ಎಎಫ್‌ಪಿ ಚಿತ್ರ   

ಲಂಡನ್: ಏಳು ಬಾರಿಯ ವಿಶ್ವ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ನಿಂದನೆ ವ್ಯಕ್ತವಾಗಿದ್ದನ್ನು,ಫಾರ್ಮುಲಾ ಒನ್‌ ಮತ್ತು ಮೋಟರ್ ಸ್ಪೋರ್ಟ್‌ ಆಡಳಿತ ಮಂಡಳಿ ಎಫ್‌ಐಎ ಖಂಡಿಸಿವೆ.

ಮರ್ಸಿಡಿಸ್ ಚಾಲಕ, ಬ್ರಿಟನ್‌ನ ಹ್ಯಾಮಿಲ್ಟನ್‌ ಭಾನುವಾರ ಬ್ರಿಟಿಷ್ ಗ್ರ್ಯಾನ್‌ಪ್ರಿಯಲ್ಲಿ ಚಾಂಪಿಯನ್ ಆಗಿದ್ದರು. ರೇಸ್‌ ಸಂದರ್ಭದಲ್ಲಿ ಅವರು ಮತ್ತು ಎದುರಾಳಿ ರೆಡ್‌ಬುಲ್ ತಂಡದ ಮ್ಯಾಕ್ಸ್‌ ವರ್ಸ್ಟ್ಯಾಪನ್‌ ಅವರ ಕಾರಿನ ನಡುವೆ ಅಪಘಾತ ಸಂಭವಿಸಿ ವರ್ಸ್ಟ್ಯಾಪನ್‌ ಅವರು ರೇಸ್‌ನಿಂದ ಹೊರಗುಳಿಯುವಂತಾಗಿತ್ತು.

ಚಾಂಪಿಯನ್‌ಷಿಪ್‌ನ ಬಳಿಕ ಹ್ಯಾಮಿಲ್ಟನ್‌ ಅವರನ್ನು ಜನಾಂಗೀಯ ನಿಂದನೆಗೆ ಗುರಿ ಮಾಡಲಾಗಿತ್ತು.

ADVERTISEMENT

‘ಜನಾಂಗೀಯ ನಿಂದನೆಯ ವರ್ತನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಕ್ರೀಡೆಯಲ್ಲಿ ಇಂತಹವರಿಗೆ ಜಾಗವಿಲ್ಲ‘ ಎಂದು ಫಾರ್ಮುಲಾ ಒನ್‌, ಎಫ್‌ಐಎ ಮತ್ತು ಮರ್ಸಿಡಿಸ್‌ ಕಂಪನಿ ಜಂಟಿ ಹೇಳಿಕೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.