ADVERTISEMENT

ನಕಲಿ ಪ್ರಮಾಣಪತ್ರ ಸಲ್ಲಿಕೆ: 11 ಕುಸ್ತಿಪಟುಗಳ ಅಮಾನತು

ಪಿಟಿಐ
Published 7 ಆಗಸ್ಟ್ 2025, 19:30 IST
Last Updated 7 ಆಗಸ್ಟ್ 2025, 19:30 IST
<div class="paragraphs"><p>ಅಮಾನತು</p></div>

ಅಮಾನತು

   

ನವದೆಹಲಿ: ನಕಲಿ ಜನನ ಪ್ರಮಾಣಪತ್ರಗಳನ್ನು ಸಲ್ಲಿಸಿದ 11 ಮಂದಿ ಕುಸ್ತಿಪಟುಗಳನ್ನು ಭಾರತ ಕುಸ್ತಿ ಫೆಡರೇಷನ್‌ ಅಮಾನತುಗೊಳಿಸಿದೆ.

ದೆಹಲಿ ಮುನ್ಸಿಪಲ್‌ ಕಾರ್ಪೋರೇಷನ್‌ (ಎಂಸಿಡಿ) ಇಂಥ 110 ಪ್ರಮಾಣಪತ್ರಗಳನ್ನು ಪರಿಶೀಲನೆ ನಡೆಸಿತ್ತು. ವಯೋಮಿತಿ ಮೀರಿದವರು ಇಂಥ ಪ್ರಮಾಣಪತ್ರದ ಮೂಲಕ ವಯೋವರ್ಗ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದರು. ಇನ್ನು ಕೆಲವರು ನಕಲಿ ಪ್ರಮಾಣಪತ್ರಗಳ ತಮ್ಮ ಮೂಲ ರಾಜ್ಯಗಳ ಬದಲು ಬೇರೆ ರಾಜ್ಯಗಳನ್ನು ಪ್ರತಿನಿಧಿಸುವ ‘ಅವಕಾಶ’ ಗಿಟ್ಟಿಸಿಕೊಳ್ಳುತ್ತಿದ್ದರು.

ADVERTISEMENT

ಕೆಲವು ಪ್ರಕರಣಗಳಲ್ಲಿ ಕ್ರೀಡಾಪಟು ಜನಿಸಿದ 12–15 ವರ್ಷಗಳ ನಂತರ ಪ್ರಮಾಣಪತ್ರಗಳನ್ನು ನೀಡಿದ ನಿದರ್ಶನಗಳೂ ಬಯಲಾಗಿವೆ. ಕೆಲವು ಪ್ರಮಾಣಪತ್ರಗಳನ್ನು ಎಂಸಿಡಿ ನೀಡಿದೆ. ಕೆಲವು ಪ್ರಮಾಣಪತ್ರಗಳನ್ನು ಉಪ ವಿಭಾಗಾಧಿಕಾರಿ ಆದೇಶದಂತೆ ನೀಡಲಾಗಿದೆ.

ರಾಷ್ಟ್ರೀಯ ಜೂನಿಯರ್ ತಂಡಗಳನ್ನು ಆಯ್ಕೆ ಮಾಡುವಾಗ, ಕೆಲವು ಕುಸ್ತಿಪಟುಗಳು ತಮಗಿಂತ ಕೆಳ ವಯೋವರ್ಗಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಅರ್ಹ ಕುಸ್ತಿಪಟುಗಳು ಅವಕಾಶವಂಚಿತರಾಗುತ್ತಿದ್ದರು.

ದೆಹಲಿಯ ಕುಸ್ತಿಪಟು ರಿತಿಕಾ ಅವರ ತಂದೆ ಕ್ರೀಡಾ ಸಚಿವಾಲಯದ ಮೊರೆ ಹೋಗಿ, ಹರಿಯಾಣದ ಕುಸ್ತಿಪಟು ಇಶಿಕಾ ಅವರಿಗೆ ದೆಹಲಿ ಪರ ಸ್ಪರ್ಧಿಸಲು ಅವಕಾಶ ನೀಡಲಾಗುತ್ತಿದೆ ಎಂದು ದೂರಿದ್ದರು. ಇಶಿಕಾ 53 ಕೆ.ಜಿ. ವಿಭಾಗದಲ್ಲಿ ಭಾಗವಹಿಸುತ್ತಿದ್ದು, ಇದು ಫೆಡರೇಷನ್‌ನ ಕಾಯಂ ವಾಸಸ್ಥಾನ ನಿಯಮದ ಉಲ್ಲಂಘನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.