ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ ಕುಸ್ತಿ: ಭಾರತಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 16:20 IST
Last Updated 20 ಅಕ್ಟೋಬರ್ 2025, 16:20 IST
ಭಾರತ ಕುಸ್ತಿ ಫೆಡರೇಷನ್‌ ಲಾಂಛನ
ಭಾರತ ಕುಸ್ತಿ ಫೆಡರೇಷನ್‌ ಲಾಂಛನ   

ನೋವಿಸಾಡ್‌ (ಸರ್ಬಿಯಾ): ಭಾರತದ ಗ್ರೀಕೊ ರೋಮನ್‌ ಕುಸ್ತಿಪಟುಗಳು ಸೋಮವಾರ ಆರಂಭಗೊಂಡ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನ ನಿರಾಸೆ ಅನುಭವಿಸಿದರು.

63 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿರುವ ಗೌರವ್‌ ಅವರು ಎಂಟರ ಘಟ್ಟದಲ್ಲಿ 1–8ರಿಂದ ಕಿರ್ಗಿಸ್ತಾನದ ಕುತ್ತುಬೆಕ್‌ ಎ. ಅಬ್ದುರಝಾಕೊವ್‌ ವಿರುದ್ಧ ಪರಾಭವಗೊಂಡರು. 77 ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅಂಕಿತ್‌ ಅವರೂ ಇದೇ ಅಂತರದಲ್ಲಿ ಸರ್ಬಿಯಾದ ಝಲನ್‌ ಪೆಕ್‌ ಅವರಿಗೆ ಶರಣಾದರು.

87 ಕೆ.ಜಿ. ವಿಭಾಗದ ಅರ್ಹತಾ ಸುತ್ತಿನಲ್ಲಿ ರೋಹಿತ್‌ ಬುರಾ ಅವರು 0–9ರಿಂದ ಪೇಟನ್‌ ಜೆ. ಜೇಕಬ್‌ಸನ್‌ (ಅಮೆರಿಕ) ವಿರುದ್ಧ ಸೋಲುಂಡರು. ಜೋಗಿಂದರ್‌ ರಾಥಿ ಅವರು 130 ಕೆ.ಜಿ. ವಿಭಾಗದ ಅರ್ಹತಾ ಸುತ್ತಿನಲ್ಲಿ 1–4ರಿಂದ ಉಜ್ಬೇಕಿಸ್ತಾನದ ದಮಿರ್ಖೊನ್‌ ರಖ್ಮತೊವ್‌ ಎದುರು ಸೋತರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.