ADVERTISEMENT

ಬಾಕ್ಸಿಂಗ್‌: ಪ್ರೀ ಕ್ವಾರ್ಟರ್‌ಗೆ ಗೌರವ್‌ ಸೋಲಂಕಿ, ಆಶಿಶ್‌

ಒಲಿಂಪಿಕ್ಸ್‌ ಅರ್ಹತಾ ಏಷ್ಯನ್ ಬಾಕ್ಸಿಂಗ್‌ ಟೂರ್ನಿ

ಪಿಟಿಐ
Published 3 ಮಾರ್ಚ್ 2020, 20:02 IST
Last Updated 3 ಮಾರ್ಚ್ 2020, 20:02 IST
ಭಾರತದ ಗೌರವ್‌ ಸೋಲಂಕಿ (ನೀಲಿ ಜೆರ್ಸಿ) ಎದುರಾಳಿಗೆ ಪಂಚ್‌ ಮಾಡಿದರು
ಭಾರತದ ಗೌರವ್‌ ಸೋಲಂಕಿ (ನೀಲಿ ಜೆರ್ಸಿ) ಎದುರಾಳಿಗೆ ಪಂಚ್‌ ಮಾಡಿದರು   

ಅಮಾನ್‌, ಜೋರ್ಡಾನ್‌: ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ, ಭಾರತದ ಗೌರವ್‌ ಸೋಲಂಕಿ (57 ಕೆಜಿ ವಿಭಾಗ) ಹಾಗೂ ಆಶಿಶ್‌ ಕುಮಾರ್‌ (75 ಕೆಜಿ) ಒಲಿಂಪಿಕ್ಸ್‌ ಅರ್ಹತಾ ಏಷ್ಯನ್‌ ಬಾಕ್ಸಿಂಗ್‌ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಮಂಗಳವಾರ ನಡೆದ ಮೊದಲ ಸುತ್ತಿನ ಬೌಟ್‌ನಲ್ಲಿ ಗೌರವ್‌ ಅವರು ಕಿರ್ಗಿಸ್ತಾನದ ಅಕಿಲ್ಬೆಕ್‌ ಎಸೆನ್ಬೆಕ್‌ ವುಲು ಎದುರು 5–0 ಪಾಯಿಂಟ್ಸ್‌ಗಳಿಂದ ಗೆದ್ದರು.

ಕಿರ್ಗಿಸ್ತಾನದಲ್ಲಿ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿ ರುವಎಸೆನ್ಬೆಕ್‌ ಉಲು ವಿರುದ್ಧ ಗೌರವ್‌ ಸಂಪೂರ್ಣ ಪಾರಮ್ಯ ಮೆರೆದರು. ನಿಖರ ದಾಳಿ ಹಾಗೂ ನೇರ ಪಂಚ್‌ಗಳಿಂದ ಎದುರಾಳಿಯನ್ನು ಕಂಗೆಡಿಸಿದರು. 16ರ ಘಟ್ಟದ ಹಣಾಹಣಿಯಲ್ಲಿ ಅವರು ಉಜ್ಬೆಕಿಸ್ತಾನದ ಮಿರ್‌ ಅಜೀಜ್‌ಬೆಕ್‌ ಮಿರ್ಜಾ ಖಲಿಲೊವ್‌ ಎದುರು ಸೆಣಸಲಿದ್ದಾರೆ.

ADVERTISEMENT

57 ಕೆಜಿ ವಿಭಾಗದಲ್ಲಿಮಿರ್‌ ಅಜೀ ಜ್‌ಬೆಕ್‌ ವಿಶ್ವ ಚಾಂಪಿಯನ್‌ ಆಗಿದ್ದಾರೆ.

ಮತ್ತೊಂದು ಹಣಾಹಣಿಯಲ್ಲಿ ಏಷ್ಯನ್‌ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಆಶಿಶ್‌, 5–0ಯಿಂದ ತೈವಾನ್‌ನ ಕಾನ್‌ ಚಿಯಾ ವೇ ಅವರಿಗೆ ಆಘಾತ ನೀಡಿದರು.

ಮುಂದಿನ ಬೌಟ್‌ನಲ್ಲಿ ಅವರು ಕಿರ್ಗಿಸ್ತಾನದ ಒಮುರ್ಬೆಕ್‌ ಬೆಕ್‌ಜಿಗಿಟ್‌ ವುಲು ಸವಾಲಿಗೆ ಸಜ್ಜಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.