ADVERTISEMENT

ಕೃಷಿ ವಿ.ವಿ ಕ್ರೀಡಾಕೂಟ: ಜಿಕೆವಿಕೆ ಮಹಿಳಾ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 22:53 IST
Last Updated 12 ಮಾರ್ಚ್ 2020, 22:53 IST
ವಾಲಿಬಾಲ್ ಪಂದ್ಯದಲ್ಲಿ ಪ್ರಥಮಸ್ಥಾನ ಗಳಿಸಿದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ (ಜಿಕೆವಿಕೆ)ಮಹಿಳಾ ತಂಡ. ನಿಂತಿರುವವರು(ಎಡದಿಂದ ಬಲಕ್ಕೆ) ಬೇಬಿ ಬಾಯಿ, ಸೀಮಾ, ಲೆರಿಸ್ಸ, ಲಾವಣ್ಯ ಹಾಗೂ ಸಂಗೀತಾ, ಯುಕ್ತ, ಮೇಘನಾ (ಕುಳಿತಿರುವವರು).
ವಾಲಿಬಾಲ್ ಪಂದ್ಯದಲ್ಲಿ ಪ್ರಥಮಸ್ಥಾನ ಗಳಿಸಿದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ (ಜಿಕೆವಿಕೆ)ಮಹಿಳಾ ತಂಡ. ನಿಂತಿರುವವರು(ಎಡದಿಂದ ಬಲಕ್ಕೆ) ಬೇಬಿ ಬಾಯಿ, ಸೀಮಾ, ಲೆರಿಸ್ಸ, ಲಾವಣ್ಯ ಹಾಗೂ ಸಂಗೀತಾ, ಯುಕ್ತ, ಮೇಘನಾ (ಕುಳಿತಿರುವವರು).   

ಯಲಹಂಕ: ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲಭಾರತ ಅಂತರಕೃಷಿ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಆಟಗಾರರು, ಹಲವು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ಶಿಪ್ ಹಾಗೂ ಸಮಗ್ರ ತಂಡ ಪ್ರಶಸ್ತಿ ಗೆದ್ದುಗೊಂಡಿದ್ದಾರೆ.

ಮಹಿಳಾ ವಿಭಾಗದಲ್ಲಿ ವಾಲಿಬಾಲ್, ಬ್ಯಾಸ್ಕೆಟ್ ಬಾಲ್-ಪ್ರಥಮ, ಕೊಕ್ಕೊ ದ್ವಿತೀಯ ಮತ್ತು 100, 200 ಹಾಗೂ 4X100 ಮೀಟರ್ ರಿಲೇ ಪಂದ್ಯದಲ್ಲಿ ಪ್ರಥಮಸ್ಥಾನ ಗಳಿಸಿದ್ದಾರೆ.

ಪುರುಷರ ವಿಭಾಗದಲ್ಲಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿಜೇತರಾದ ಆಟಗಾರರನ್ನು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್, ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಧ್ಯಾಪಕರು ಅಭಿನಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.