ADVERTISEMENT

ಚಿನ್ನಕ್ಕೆ ಗುರಿಯಿಟ್ಟ ವಿಜಯ್‌ವೀರ್‌–ರೈಥಮ್‌ ಸಂಗ್ವಾನ್‌

ಜೂನಿಯರ್‌ ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌: ಹತ್ತನೇ ಚಿನ್ನ ಗೆದ್ದ ಭಾರತ

ಪಿಟಿಐ
Published 8 ಅಕ್ಟೋಬರ್ 2021, 11:52 IST
Last Updated 8 ಅಕ್ಟೋಬರ್ 2021, 11:52 IST
ಮಹಿಳೆಯರ 50 ಮೀ. ರೈಫಲ್‌ ತ್ರಿ ಪೋಸಿಷನ್ಸ್‌ನಲ್ಲಿ ಬೆಳ್ಳಿ ಗೆದ್ದ ಪ್ರಸಿದ್ಧಿ ಮಹಾಂತ್‌, ಆಯುಷಿ ಪೋದ್ದರ್‌ ಮತ್ತು ನಿಶ್ಚಲ್‌– ಪಿಟಿಐ ಚಿತ್ರ
ಮಹಿಳೆಯರ 50 ಮೀ. ರೈಫಲ್‌ ತ್ರಿ ಪೋಸಿಷನ್ಸ್‌ನಲ್ಲಿ ಬೆಳ್ಳಿ ಗೆದ್ದ ಪ್ರಸಿದ್ಧಿ ಮಹಾಂತ್‌, ಆಯುಷಿ ಪೋದ್ದರ್‌ ಮತ್ತು ನಿಶ್ಚಲ್‌– ಪಿಟಿಐ ಚಿತ್ರ   

ಲಿಮಾ, ಪೆರು: ರೈಥಮ್ ಸಂಗ್ವಾನ್ ಹಾಗೂ ವಿಜಯ್‌ವೀರ್ ಸಿಧು ಚಿನ್ನಕ್ಕೆ ಮುತ್ತಿಡುವುದರೊಂದಿಗೆ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶೂಟರ್‌ಗಳ ಪಾರಮ್ಯ ಮುಂದುವರಿದಿದೆ.

25 ಮೀಟರ್ಸ್‌ ರ‍್ಯಾಪಿಡ್‌ ಫೈರ್ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ರೈಥಮ್ ಹಾಗೂ ವಿಜಯ್‌ವೀರ್ ಅಗ್ರಸ್ಥಾನ ಗಳಿಸಿದರು. ಇದರೊಂದಿಗೆ ಚಾಂಪಿಯನ್‌ಷಿಪ್‌ ಭಾರತಕ್ಕೆ ಒಲಿದ ಪದಕಗಳ ಒಟ್ಟು ಸಂಖ್ಯೆ 23ಕ್ಕೇರಿತು. ಅದರಲ್ಲಿ 10 ಚಿನ್ನದ ಪದಕಗಳು. ಇದರೊಂದಿಗೆ ಪದಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

ರೈಥಮ್–ಸಿಧು ಜೋಡಿಯು ಫೈನಲ್‌ನಲ್ಲಿ 9–1ರಿಂದ ಥಾಯ್ಲೆಂಡ್‌ನ ಕನ್ಯಾಕೊರ್ನ್‌ ಹಿರುನ್‌ಫೊಯಮ್‌–ಶಾವಕೊನ್ ತ್ರಿನಿಪಕ್ರೊನ್ ಅವರನ್ನು ಮಣಿಸಿದರು.

ADVERTISEMENT

ಈ ವಿಭಾಗದ ಕಂಚಿನ ಪದಕವು ಭಾರತದ ತೇಜಸ್ವಿನಿ ಮತ್ತು ಅನೀಶ್ ಅವರ ಪಾಲಾಯಿತು. ಕಂಚಿನ ಪದಕದ ಹಣಾಹಣಿಯಲ್ಲಿ ಈ ಜೋಡಿಯು ಥಾಯ್ಲೆಂಡ್‌ನ ಮತ್ತೊಂದು ಜೋಡಿಯಾದ ಚಾವ್ಸಿಯಾ ಪಡುಕಾ ಮತ್ತು ರಾಮ್ ಖಮಹೆಂಗ್‌ ಅವರನ್ನು 10–8ರಿಂದ ಮಣಿಸಿತು.

ಮಹಿಳೆಯರ 50 ಮೀ. ರೈಫಲ್‌ 3 ಪೋಸಿಷನ್ಸ್‌ನಲ್ಲಿ ಪ್ರಸಿದ್ಧಿ ಮಹಾಂತ್, ನಿಶ್ಚಲ್‌ ಮತ್ತು ಆಯುಷಿ ಪೋದ್ದರ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಈ ಶೂಟರ್‌ಗಳು 43–47ರಿಂದ ಅಮೆರಿಕದ ಎಲಿಜಬೆತ್‌ ಮೆಗಿನ್‌, ಲೋರೇನ್‌ ಜಾವೂನ್‌ ಮತ್ತು ಕೊರೊಲಿನ್‌ ಟಕ್ಕರ್ ಅವರಿಗೆ ಸೋತಿತು.

ಭಾರತದ ಬಳಿ ಸದ್ಯ 10 ಚಿನ್ನ, ಒಂಬತ್ತು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.