ಪೇಬೆಲ್ ಬೀಚ್: ನೀರಸ ಆಟವಾಡಿದ ಭಾರತದ ಅನಿರ್ಬನ್ ಲಾಹಿರಿ ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಹೊರ ಬಿದ್ದರು.
31 ವರ್ಷದ ಅನಿರ್ಬನ್‌ಗೆ ಇದು ಈ ವರ್ಷದ ಮೊದಲ ಮಹತ್ವದ ಟೂರ್ನಿಯಾಗಿತ್ತು. ನಿರೀಕ್ಷೆಗೆ ತಕ್ಕಂತೆ ಆಡಲು ವಿಫಲರಾದ ಅವರು ಮೊದಲ ದಿನವೇ ನಿರಾಸೆಗೆ ಒಳಗಾಗಿದ್ದರು.
ಶನಿವಾರದ ಅಂತ್ಯಕ್ಕೆ ಜಸ್ಟಿನ್ ರೋಸ್ ಅವರನ್ನು ಹಿಂದಿಕ್ಕಿ ಗ್ಯಾರಿ ವುಡ್‌ಲ್ಯಾಂಡ್ ಅಗ್ರ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಅಮೆರಿಕದ ಬ್ರೂಕ್ಸ್ ಕೋಪ್ಕಾ ನಂತರದ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.