ಪ್ರಾತಿನಧಿಕ ಚಿತ್ರ
ನವದೆಹಲಿ: ಅನುಭವಿ ಗೋಲ್‌ಕೀಪರ್ ನೀನಾ ಶಿಲ್ ವೀರೋಚಿತ ರಕ್ಷಣೆ ಪ್ರದರ್ಶಿಸಿದರೂ, ಭಾರತ ತಂಡ, 20ನೇ ಏಷ್ಯನ್ ಮಹಿಳೆಯರ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಇರಾನ್ ಎದುರು ಬುಧವಾರ 30–32ರಲ್ಲಿ ಸೋಲನುಭವಿಸಿತು.
‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಮಂಗಳವಾರ ಹಾಂಗ್‌ಕಾಂಗ್ ಮೇಲೆ ಜಯಗಳಿಸಿತ್ತು. ಇನ್ನೊಂದು ಪಂದ್ಯದಲ್ಲಿ ಪ್ರಬಲ ಚೀನಾ 47–10 ರಿಂದ ಸಿಂಗಪುರ ತಂಡವನ್ನು ಸೋಲಿಸಿತು.
ಭಾರತ ಮೊದಲ ಬಾರಿ ಈ ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಿದ್ದು, ಇಂದಿಗಾ ಗಾಂಧಿ ಅರೇನಾದಲ್ಲಿ ಪಂದ್ಯಗಳು ನಡೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.