ಬ್ಯಾಸ್ಕೆಟ್‌ಬಾಲ್
ಬೆಂಗಳೂರು:ಜಿಎಸ್‌ಟಿ ಮತ್ತು ಕಸ್ಟಮ್ಸ್, ಭಾರತ್ ಎಸ್‌ಯು, ಐಬಿಬಿಸಿ ಮತ್ತು ಕೋರಮಂಗಲ ಎಸ್‌ಸಿ ತಂಡಗಳು ಎಂ.ಸಿ.ಶ್ರೀನಿವಾಸ್ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಬಿ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಲೀಗ್ ಪಂದ್ಯದಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದವು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಿಎಸ್‌ಟಿ ಮತ್ತು ಕಸ್ಟಮ್ಸ್ ತಂಡ 77– 43 ಅಂಕಗಳಿಂದ ಕೋರಮಂಗಲ ಎಸ್‌ಸಿ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಜಿಎಸ್‌ಟಿ ಮತ್ತು ಕಸ್ಟಮ್ಸ್ ತಂಡ ಪರ ನವೀನ್ (21 ಅಂಕ), ಆದರ್ಶ್ (12 ಅಂಕ) ಗೆಲುವಿಗೆ ಶ್ರಮಿಸಿದರು. ಕೋರಮಂಗಲ ಪರ ಪ್ರಿಯಾನ್ಶು (14 ಅಂಕ) ಮತ್ತು ಕರಣ್ (11 ಅಂಕ) ಅವರಿಂದ ಉತ್ತಮ ಆಟ ಮೂಡಿಬರಲಿಲ್ಲ.
ಇನ್ನೊಂದು ಪಂದ್ಯದಲ್ಲಿ ಅಮರ್ಥ್ಯ ಅವರ ಆಟದ ಬಲದ ನೆರವಿನಿಂದ ಮಂಡ್ಯ ಜಿಲ್ಲಾ ತಂಡವು ಎದುರಾಳಿ ಭಾರತ್ ಎಸ್.ಯು ತಂಡವನ್ನು 73–66 ಅಂಕಗಳಿಂದ ಮಣಿಸಿತು. ಮಂಡ್ಯ ತಂಡದ ಪರ ಅಮರ್ಥ್ಯ(73 ಅಂಕ), ಹಾನೊಚ್ (17 ಅಂಕ) ಮತ್ತು ಶಶಾಂಕ್ ಗೌಡ (14 ಅಂಕ) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ್ ತಂಡದ ಪರ ಅಕ್ಷಯ್ ಪ್ರಸಾದ್ (20 ಅಂಕ), ಕನಿಷ್ಕಾ (19 ಅಂಕ) ವ್ಯರ್ಥ ಹೋರಾಟ ನಡೆಸಿದರು. ಪಂದ್ಯ ಸೋತರೂ ಉಪಾಂತ್ಯ ತಲುಪಿತು.
ಮತ್ತೊಂದು ಪಂದ್ಯದಲ್ಲಿ ವಿಮಾನಪುರ ಎಸ್‌ಸಿ ತಂಡ 79–74 ಅಂಕಗಳಿಂದ ರಾಜಮಹಲ್ ಬಿಸಿ ವಿರುದ್ಧ ಜಯಿಸಿತು. ವಿಮಾನಪುರ ತಂಡದ ಪರ ರಕ್ಷಾನ್ (23 ಅಂಕ), ಪೊನ್ನಪ್ಪ (17 ಅಂಕ) ಮತ್ತು ರಾಹುಲ್ (12 ಅಂಕ) ಗಮನ ಸೆಳೆದರು. ರಾಜಮಹಲ್ ಪರ ಶಿವರಂಜನ್ (21 ಅಂಕ), ಶಿಶಿರ್ (17 ಅಂಕ) ಮತ್ತು ವಿಘ್ನೇಶ್ 916 ಅಂಕ) ವಿಫಲ ಯತ್ ನಡೆಸಿದರು.
ಇನ್ನೊಂದು ಪಂದ್ಯದಲ್ಲಿ ಐಬಿಬಿಸಿ ತಂಡ 84– 53 ಅಂಕಗಳಿಂದ ಬೆಂಗಳೂರು ಸ್ಪೋರ್ಟಿಂಗ್ ತಂಡವನ್ನು ಸೋಲಿಸಿತು. ಐಬಿಬಿಸಿ ಪರ ಕರಣ್ ಅಯ್ಯಪ್ಪ (27 ಅಂಕ), ಯಶಸ್ (22 ಅಂಕ) ತಂಡದ ಗೆಲುವಿಗೆ ಕಾರಣರಾದರು. ಸ್ಪೋರ್ಟಿಂಗ್ ತಂಡದ ಪರ ಆಯೂಷ್ (13 ಅಂಕ), ನಿಖಿಲ್ (10 ಅಂಕ) ಹೋರಾಟ ಫಲ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.