ADVERTISEMENT

ಹಾಕಿ: ಭಾರತ ತಂಡಕ್ಕೆ ಗುರಿಂದರ್ ನಾಯಕ

ಲಾಸೆನ್‌ನಲ್ಲಿ ಮೊದಲ ಬಾರಿ ನಡೆಯಲಿರುವ ಎಫ್‌ಐಎಚ್‌ 5 ಸೈಡ್‌ ಟೂರ್ನಿ

ಪಿಟಿಐ
Published 18 ಮೇ 2022, 12:40 IST
Last Updated 18 ಮೇ 2022, 12:40 IST
ಗುರಿಂದರ್ ಸಿಂಗ್‌– ಟ್ವಿಟರ್ ಚಿತ್ರ
ಗುರಿಂದರ್ ಸಿಂಗ್‌– ಟ್ವಿಟರ್ ಚಿತ್ರ   

ನವದೆಹಲಿ: ಸ್ವಿಟ್ಜರ್ಲೆಂಡ್‌ನ ಲಾಸೆನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಎಫ್‌ಐಎಚ್‌ ಹಾಕಿ ಫೈವ್‌ ಸೈಡ್‌ ಟೂರ್ನಿಗೆ ಒಂಬತ್ತು ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಗುರಿಂದರ್ ಸಿಂಗ್ ತಂಡದ ಸಾರಥ್ಯ ವಹಿಸಲಿದ್ದು, ಸುಮಿತ್‌ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ಜೂನ್ 5 ಮತ್ತು ಆರರಂದು ಇದೇ ಮೊದಲ ಬಾರಿಗೆ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡವು ಮಲೇಷ್ಯಾ, ಪಾಕಿಸ್ತಾನ, ಪೋಲೆಂಡ್‌ ಮತ್ತು ಆತಿಥೇಯ ತಂಡಗಳನ್ನು ಎದುರಿಸಲಿದೆ. ಪ್ರತಿ ತಂಡದಲ್ಲಿ ಒಬ್ಬ ಗೋಲ್‌ಕೀಪರ್ ಮತ್ತು ನಾಲ್ವರು ಫೀಲ್ಡ್ ಆಟಗಾರರು ಇರಲಿದ್ದಾರೆ.

‘ಎಫ್‌ಐಎಚ್‌ ಹಾಕಿ ಫೈವ್ ಸೈಡ್‌ ಟೂರ್ನಿಯು ಭಿನ್ನ ಮಾದರಿಯದ್ದಾಗಿದ್ದು, ನಮ್ಮ ಆಟಗಾರರಿಗೆ ಹೊಸ ಅವಕಾಶವಾಗಿದೆ. ವೇಗ ಮತ್ತು ಮನರಂಜನಾ ಮಾದರಿಯ ಈ ಗೇಮ್ ಆಡಲು ನಾವು ಉತ್ಸುಕರಾಗಿದ್ದೇವೆ‘ ಎಂದು ಭಾರತ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.

ADVERTISEMENT

ತಂಡ ಇಂತಿದೆ:ಗುರಿಂದರ್ ಸಿಂಗ್ (ನಾಯಕ), ಸುಮಿತ್ (ಉಪನಾಯಕ), ಪವನ್, ಸಂಜಯ್, ಮನದೀಪ್ ಮೋರ್, ರವಿಚಂದ್ರ ಸಿಂಗ್, ದಿಲ್‌ಪ್ರೀತ್ ಸಿಂಗ್, ಮೊಹಮ್ಮದ್ ರಹೀಲ್ ಮೌಸೀನ್, ಗುರುಸಾಹಿಬ್‌ಜೀತ್ ಸಿಂಗ್.

ಕಾಯ್ದಿರಿಸಿದ ಆಟಗಾರರು: ಪ್ರಶಾಂತ್ ಕುಮಾರ್ ಚೌಹಾಣ್, ಬಾಬಿ ಸಿಂಗ್ ಧಾಮಿ, ಸುದೀಪ್ ಚಿರ್ಮಾಕೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.