ADVERTISEMENT

ಹ್ಯಾಂಡ್‌ಬಾಲ್: ಸುಹಾನ ನೇತೃತ್ವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 19:31 IST
Last Updated 10 ಮಾರ್ಚ್ 2023, 19:31 IST

ಹೊನ್ನಾಳಿ: ಇಲ್ಲಿಯ ಸುಹಾನ ಜಂಬಗಿ ಅವರನ್ನು ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಮಹಿಳಾ ತಂಡದ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ.

ಇದೇ 15ರಿಂದ ವಾರಾಣಸಿಯಲ್ಲಿ ನಡೆಯಲಿರುವ 51ನೇ ರಾಷ್ಟ್ರೀಯ ಸೀನಿಯರ್ ಹ್ಯಾಂಡ್‍ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವು ಸ್ಪರ್ಧಿಸಲಿದೆ. ಶುಕ್ರವಾರ ತಂಡವನ್ನು ಪ್ರಕಟಿಸಲಾಯಿತು. ಇಲ್ಲಿನ ಮೃತ್ಯುಂಜಯ ಶಿವಾಚಾರ್ಯ ಪ್ರಥಮದರ್ಜೆ ಕಾಲೇಜಿನಲ್ಲಿ 15 ದಿನ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 38 ಕ್ರೀಡಾಪಟುಗಳು ಪಾಲ್ಗೊಂಡಿದ್ದರು ಎಂದು ರಾಜ್ಯ ಹ್ಯಾಂಡ್‍ಬಾಲ್ ಅಸೋಷಿಯೇಶನ್‌ನ ಖಜಾಂಚಿಯೂ ಆಗಿರುವ ತರಬೇತುದಾರ ಪ್ರಕಾಶ್ ನರಗಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉಪನಾಯಕಿಯಾಗಿ ಶಿವಮೊಗ್ಗದ ರಜನಿ ಆಯ್ಕೆಯಾಗಿದ್ದಾರೆ. ಬಾಗಲಕೋಟೆಯ ನಿಖಿತಾ ಮಾನೆ, ಬೆಂಗಳೂರಿನ ನಿವೇದಿತಾ ಸಾಹು, ಹೊನ್ನಾಳಿಯ ರಶ್ಮಿ, ಎಚ್.ಬಿ. ರೂಪಾ, ಎಸ್.ಪಿ.ಸುಪ್ರಿನಾ, ಎಚ್.ಆರ್. ಸ್ವಾತಿ, ಬಿ. ದಿವ್ಯಾ, ಕೆ.ಎಂ. ಸ್ಫೂರ್ತಿ, ಹಾಸನದ ಡಿ.ಆರ್. ರಾಣಿ, ಮಂಗಳೂರಿನ ರೋಷನ್ ಆರ್., ಬೆಳಗಾವಿಯ ಎಂ. ಶ್ರುತಿ, ಜೆ. ಸಾನಿಯಾ, ಸಾಗರದ ಪಿ. ರೂಪಾ, ತುಮಕೂರಿನ ಕೆ. ನೇತ್ರಾವತಿ, ಹಾವೇರಿಯ ಸಂಜನಾ ಪಾಟೀಲ ಹಾಗೂ ವಿ. ಪೂಜಾ ತಂಡದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.