ADVERTISEMENT

‘ಕಠಿಣ ಪರಿಶ್ರಮವೇ ಯಶಸ್ಸಿಗೆ ದಾರಿ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 19:03 IST
Last Updated 26 ಮಾರ್ಚ್ 2023, 19:03 IST
ಶಾಲಾಮಕ್ಕಳಿಗೆ ಆಟೊಗ್ರಾಫ್ ನೀಡಿದ ನೀರಜ್ ಚೋಪ್ರಾ
ಶಾಲಾಮಕ್ಕಳಿಗೆ ಆಟೊಗ್ರಾಫ್ ನೀಡಿದ ನೀರಜ್ ಚೋಪ್ರಾ   

ಬೆಂಗಳೂರು: ಕಠಿಣ ಪರಿಶ್ರಮವೇ ಯಶಸ್ಸಿಗೆ ದಾರಿ. ಕ್ರೀಡಾಪಟು ಆಗುವ ಕನಸು ನಿಮ್ಮದಾಗಿದ್ದರೆ ನಿಮ್ಮ ಗುರಿ ಒಲಿಂಪಿಕ್ಸ್ ಚಿನ್ನ ಗೆಲ್ಲುವುದಾಗಬೇಕು ಎಂದು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್‌ ಥ್ರೊ ಅಥ್ಲೀಟ್‌ ನೀರಜ್‌ ಚೋಪ್ರಾ ಹೇಳಿದರು.

ಇಲ್ಲಿಯ ಯಲಹಂಕದಲ್ಲಿರುವ ವಿಶ್ವ ವಿದ್ಯಾಪೀಠ ಶಾಲೆಯ ಕ್ರೀಡಾ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡಿದ್ದ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

‘ನಾನು ಚಿನ್ನದ ಪದಕ ಗೆದ್ದಿದ್ದಕ್ಕೆ ನಮ್ಮ ರಾಷ್ಟ್ರಗೀತೆಯು ಒಲಿಂಪಿಕ್ ಅಂಗಣದಲ್ಲಿ ಮೊಳಗುವಂತಾಯಿತು. ವೈಫಲ್ಯಗಳಿಗೆ ಕುಗ್ಗದೆ ಮುನ್ನುಗ್ಗಬೇಕು‘ ಎಂದು ನೀರಜ್ ನುಡಿದರು.ತಮ್ಮ ಸಾಧನೆಯ ಹಿಂದಿನ ಶ್ರಮದ ಕುರಿತು ಮಕ್ಕಳೊಂದಿಗೆ ಹಂಚಿ ಕೊಂಡರು.

ADVERTISEMENT

ಕಾರ್ಯಕ್ರಮದ ಬಳಿಕ ಚೋಪ್ರಾ ಅವರು ಬಳ್ಳಾರಿಯ ಇನ್‌ಸ್ಪೈರ್‌ ಇನ್‌ಸ್ಟಿ ಟ್ಯೂಟ್‌ ಆಫ್‌ ಸ್ಪೋರ್ಟ್‌ಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.