ADVERTISEMENT

ಹರಿಯಾಣದ ಮುಡಿಗೆ 7 ಚಿನ್ನ

ಪಿಟಿಐ
Published 3 ಫೆಬ್ರುವರಿ 2019, 17:20 IST
Last Updated 3 ಫೆಬ್ರುವರಿ 2019, 17:20 IST

ಸೂರತ್‌: ಹರಿಯಾಣ ತಂಡವು ರಾಷ್ಟ್ರೀಯ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಎರಡನೇ ದಿನ ಏಳು ಚಿನ್ನದ ಪದಕಗಳನ್ನು ಗೆದ್ದರು.

ಭಾನುವಾರ ನಡೆದ ಚಾಂಪಿಯನ್‌ಷಿಪ್‌ ಹತ್ತು ವಿಭಾಗಗಳ ಸ್ಪರ್ಧೆಯಲ್ಲಿಅಂಜು (53 ಕೆ.ಜಿ), ಪ್ರಿಯಾಂಕ (57 ಕೆ.ಜಿ), ಅಂಜಲಿ (59 ಕೆ.ಜಿ), ಟೀನಾ (65 ಕೆ.ಜಿ), ಸೋನಿಕಾ ಹೂಡಾ (68 ಕೆ.ಜಿ), ನಿಶಾ (72 ಕೆ.ಜಿ) ಮತ್ತು ಕರುಣಾ (76 ಕೆ.ಜಿ) ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಉತ್ತರ ಪ್ರದೇಶದ ನೀಲಂ (50 ಕೆ.ಜಿ) ಮತ್ತು ಅರ್ಜು ತೋಮರ್‌ (55ಕೆ.ಜಿ) ವಿಭಾಗದಲ್ಲಿ ಜಯಿಸಿದರೇ, ಮಧ್ಯಪ್ರದೇಶದ ಅಪೂರ್ವಾ (62 ಕೆ.ಜಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ತಂಡಗಳ ಚಾಂಪಿಯನ್‌ಷಿಪ್‌ನಲ್ಲಿ ಹರಿಯಾಣ ಪ್ರಥಮ ಸ್ಥಾನ ಗಳಿಸಿತು. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.