ADVERTISEMENT

ಸಿಂಧು ಸಾಮರ್ಥ್ಯಕ್ಕೆ ಧಕ್ಕೆ ತಂದ ವೇಳಾಪಟ್ಟಿ

ಪಿಟಿಐ
Published 20 ನವೆಂಬರ್ 2019, 19:25 IST
Last Updated 20 ನವೆಂಬರ್ 2019, 19:25 IST
ಪಿ.ವಿ.ಸಿಂಧು -ಪ್ರಜಾವಾಣಿ ಚಿತ್ರ
ಪಿ.ವಿ.ಸಿಂಧು -ಪ್ರಜಾವಾಣಿ ಚಿತ್ರ   

ಕೋಲ್ಕತ್ತ: ಸತತ ಪಂದ್ಯಗಳನ್ನು ಆಡಿದ್ದೇ ಪಿ.ವಿ.ಸಿಂಧು ಅವರ ಸಾಮರ್ಥ್ಯ ಕುಗ್ಗಲು ಕಾರಣ ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್‌ ಅಭಿಪ್ರಾಯಪಟ್ಟಿದ್ದಾರೆ.

‘ವಿಶ್ವ ಚಾಂಪಿಯನ್‌ಷಿಪ್‌ ನಂತರದ ಕೆಲವು ಪಂದ್ಯಗಳಲ್ಲಿ ಸಿಂಧುಗೆ ನೈಜ ಸಾಮರ್ಥ್ಯ ತೋರಲು ಆಗಲಿಲ್ಲ ನಿಜ. ಆದರೆ ಮುಂದಿನ ದಿನಗಳಲ್ಲಿ ಅವರು ಪುಟಿದೇಳುವ ವಿಶ್ವಾಸವಿದೆ’ ಎಂದು ಗೋಪಿಚಂದ್‌ ಸುದ್ದಿಸಂಸ್ಥೆ ಜೊತೆ ಮಾತನಾಡಿ ಹೇಳಿದರು.

‘ಅಂತರರಾಷ್ಟ್ರೀಯ ವೇಳಾಪಟ್ಟಿಯು ವಿಶ್ವದ ಅನೇಕ ಆಟಗಾರರ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಸಿಂಧುಗೆ ಕೂಡ ಇದೇ ಸಮಸ್ಯೆ ಆಗಿದೆ’ ಎಂದು ಅವರು ಹೇಳಿದರು.

ADVERTISEMENT

ವಿಶ್ವ ಚಾಂಪಿಯನ್ ಆದ ನಂತರ ಫ್ರೆಂಚ್ ಓಪನ್ ಹೊರತುಪಡಿಸಿದರೆ ಉಳಿದ ಎಲ್ಲ ಟೂರ್ನಿಗಳಲ್ಲೂ ಸಿಂಧು ಆರಂಭಿಕ ಹಂತದಲ್ಲೇ ಹೊರಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.