ನವದೆಹಲಿ: ಡಿಫೆಂಡರ್ ಸಂಜಯ್ ಅವರು ಜುಲೈ 8ರಿಂದ ಆರಂಭವಾಗುವ ಯುರೋಪ್ ಪ್ರವಾಸದಲ್ಲಿ ಭಾರತ ಎ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ಎ ತಂಡವು ಫ್ರಾನ್ಸ್, ಐರ್ಲೆಂಡ್ ಹಾಗೂ ನೆದರ್ಲೆಂಡ್ಸ್ ವಿರುದ್ಧ ತಲಾ ಎರಡು ಹಾಗೂ ಇಂಗ್ಲೆಂಡ್, ಬೆಲ್ಜಿಯಂ ವಿರುದ್ಧ ತಲಾ ಒಂದು ಪಂದ್ಯಗಳನ್ನು ಆಡಲಿದೆ.
20 ಮಂದಿಯ ಪುರುಷರ ಎ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದ್ದು, ಎಂ. ರವಿಚಂದ್ರ ಸಿಂಗ್ ಅವರು ಉಪನಾಯಕರಾಗಿದ್ದಾರೆ. ಗೋಲ್‌ಕೀಪರ್ ಅಂಕಿತ್ ಮಲಿಕ್, ಡಿಫೆಂಡರ್ ಸುನಿಲ್ ಜೋಜೊ ಹಾಗೂ ಫಾರ್ವರ್ಡ್ ಸುದೀಪ್ ಚಿರ್ಮಾಕೊ ಅವರು ಸ್ಟಾಂಡ್ ಬೈ ಆಗಿರಲಿದ್ದಾರೆ. ಭಾರತ ತಂಡದ ಸಹಾಯಕ ಕೋಚ್ ಶಿವೇಂದ್ರ ಸಿಂಗ್ ಅವರು ಎ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ತಂಡ ಇಂತಿದೆ: ಗೋಲ್‌ಕೀಪರ್ಸ್: ಪವನ್, ಎಚ್.ಎಸ್.ಮೋಹಿತ್. ಡಿಫೆಂಡರ್ಸ್: ಪ್ರತಾಪ್ ಲಾಕ್ರಾ, ವರುಣ್ ಕುಮಾರ್, ಅಮನ್‌ದೀಪ್ ಲಾಕ್ರಾ, ಪ್ರಮೋದ್, ಸಂಜಯ್(ನಾಯಕ). ಮಿಡ್‌ಫೀಲ್ಡರ್ಸ್: ಪೂವಣ್ಣ ಸಿ.ಬಿ., ಮೊಹಮ್ಮದ್ ರಹೀಲ್ ಮೌಸೀನ್, ಎಂ. ರವಿಚಂದ್ರ ಸಿಂಗ್(ಉಪನಾಯಕ), ವಿಷ್ಣುಕಾಂತ್ ಸಿಂಗ್, ಪಾರ್ದೀಪ್ ಸಿಂಗ್, ರಾಜಿಂದರ್ ಸಿಂಗ್. ಫಾರ್ವರ್ಡ್ಸ್: ಅಂಗದ್ಬೀರ್ ಸಿಂಗ್, ಬೋಬಿ ಸಿಂಗ್ ಧಾಮಿ, ಮಣಿಂದರ್ ಸಿಂಗ್, ವೆಂಕಟೇಶ್ ಕೆ., ಆದಿತ್ಯ ಅರ್ಜುನ್ ಎಲ್., ಸೆಲ್ವನ್ ಕಾರ್ತಿ, ಉತ್ತಮ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.