ಬೆಂಗಳೂರು: ಆಂಧ್ರಪ್ರದೇಶದ ಕಾಕಿನಾಡದಲ್ಲಿ ಆಗಸ್ಟ್ 1ರಿಂದ 12ರವರೆಗೆ ನಡೆಯಲಿರುವ ಹಾಕಿ ಇಂಡಿಯಾ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡದ ಆಯ್ಕೆಯಾಗಿ ಹಾಕಿ ಕರ್ನಾಟಕವು ಟ್ರಯಲ್ಸ್ ಆಯೋಜಿಸಿದೆ.
ಶಾಂತಿನಗರ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಇದೇ 10ರಂದು ಬೆಳಿಗ್ಗೆ 9.30ರಿಂದ ಟ್ರಯಲ್ಸ್ ನಡೆಯಲಿದೆ. 2006ರ ಜ.1ರ ನಂತರ ಜನಿಸಿದ ಆಟಗಾರ್ತಿಯರು ಟ್ರಯಲ್ಸ್‌ನಲ್ಲಿ ಭಾಗವಹಿಸಬಹುದು ಎಂದು ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.