ADVERTISEMENT

ಹಾಕಿ: ಪ್ರಮುಖ ಟೂರ್ನಿಗಳಿಗೆ ಭಾರತದ ಸಂಭಾವ್ಯ ತಂಡ ಪ್ರಕಟ

ಪಿಟಿಐ
Published 25 ಜನವರಿ 2022, 12:26 IST
Last Updated 25 ಜನವರಿ 2022, 12:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂದಿನ ತಿಂಗಳು ನಿಗದಿಯಾಗಿರುವ ಎಫ್‌ಐಎಚ್‌ ಪ್ರೊ ಲೀಗ್ ಸೇರಿದಂತೆ ಈ ವರ್ಷ ನಡೆಯಲಿರುವ ಪ್ರಮುಖ ಹಾಕಿ ಟೂರ್ನಿಗಳಿಗೆ ಭಾರತದ 33 ಆಟಗಾರರ ಸಂಭಾವ್ಯ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದೆ.

ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಮೂರು ವಾರಗಳ ಕಾಲ ತಂಡದ ಶಿಬಿರ ನಡೆಯುತ್ತಿದ್ದು ಅದರಲ್ಲಿರುವ 60 ಆಟಗಾರರ ಪೈಕಿ 33 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ತಂಡದಲ್ಲಿದ್ದ ಪಿ.ಆರ್‌.ಶ್ರೀಜೇಶ್‌, ನಾಯಕ ಮನ್‌ಪ್ರೀತ್ ಸಿಂಗ್‌, ಹರ್ಮನ್‌ಪ್ರೀತ್ ಸಿಂಗ್‌, ಸುರೇಂದರ್‌ ಕುಮಾರ್, ಮನದೀಪ್ ಸಿಂಗ್‌ ಮತ್ತು ಲಲಿತ್‌ಕುಮಾರ್ ಉಪಾಧ್ಯಾಯ ತಂಡದಲ್ಲಿದ್ದಾರೆ. ಪೆನಾಲ್ಟಿ ಕಾರ್ನರ್‌ ತಜ್ಞ ಜುಗರಾಜ್‌ ಸಿಂಗ್‌, ಮನದೀಪ್ ಮೋರ್‌ ಕೂಡ ಸ್ಥಾನ ಗಿಟ್ಟಿಸಿದ್ದಾರೆ.

ADVERTISEMENT

ತಂಡ: ಗೋಲ್‌ಕೀಪರ್ಸ್: ಕೃಷ್ಣ ಬಹದ್ದೂರ್ ಪಾಠಕ್,ಪಿ.ಆರ್‌. ಶ್ರೀಜೇಶ್, ಸೂರಜ್ ಕರ್ಕೇರ.

ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ನಿಲಮ್ ಸಂಜೀಪ್ ಕ್ಸೆಸ್, ದಿಪ್ಸನ್ ಟಿರ್ಕಿ, ವರುಣ್ ಕುಮಾರ್, ಅಮಿತ್ ರೋಹಿದಾಸ್, ಮನ್‌ದೀಪ್ ಮೋರ್, ಸಂಜಯ್, ಜುಗರಾಜ್‌ ಸಿಂಗ್.

ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಸುಮಿತ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ರಾಜ್‌ಕುಮಾರ್ ಪಾಲ್, ಜಸ್ಕರನ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಮೊಯರಂಗತೇಮ್ ರವಿಚಂದ್ರ ಸಿಂಗ್, ಆಶಿಸ್ ಕುಮಾರ್ ಟೋಪ್ನೊ.

ಫಾರ್ವಡ್ಸ್: ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಆಕಾಶದೀಪ್ ಸಿಂಗ್, ಗುರು ಸಾಹಿಬ್‌ಜೀತ್‌ ಸಿಂಗ್, ಶೀಲಾನಂದ್ ಲಾಕ್ರಾ, ಅಭಿಷೇಕ್, ಸುಖಜೀತ್ ಸಿಂಗ್, ಮೊಹಮ್ಮದ್ ರಾಹೀಲ್ ಮೌಸೀನ್.

ಪುನಶ್ಚೇತನ ಶಿಬಿರದಲ್ಲಿರುವವರು: ಸಿಮ್ರನ್‌ಜೀತ್ ಸಿಂಗ್ ಮತ್ತು ಗುರಿಂದರ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.