ADVERTISEMENT

ಹಾಕಿ: ಜೂನಿಯರ್ ರಾಷ್ಟ್ರೀಯ ಶಿಬಿರಕ್ಕೆ 33 ಮಂದಿ

ಪಿಟಿಐ
Published 19 ಆಗಸ್ಟ್ 2019, 17:00 IST
Last Updated 19 ಆಗಸ್ಟ್ 2019, 17:00 IST
   

ನವದೆಹಲಿ: ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಜೂನಿಯರ್ ತಂಡಗಳ ತ್ರಿಕೋನ ಹಾಕಿ ಸರಣಿಯಲ್ಲಿ ಪಾಲ್ಗೊಳ್ಳುವ ಭಾರತ ಮಹಿಳೆಯರ ತಂಡದ ಆಯ್ಕೆ ಶಿಬಿರದಲ್ಲಿ 33 ಮಂದಿ ಪಾಲ್ಗೊಳ್ಳಲಿದ್ದಾರೆ.

ಕೋಚ್ ಬಲಜೀತ್ ಸೈನಿ ಈ ಆಟಗಾರ್ತಿಯರಿಗೆ ತರಬೇತಿ ನೀಡಲಿದ್ದು ಶಿಬಿರದಲ್ಲಿ ಫಿಟ್‌ನೆಸ್‌ ಕಾಯ್ದುಕೊಳ್ಳುವುದಕ್ಕೂ ಪ್ರತ್ಯೇಕ ತರಬೇತಿ ಸಿಗಲಿದೆ. ಸೋಮವಾರ ಆರಂಭಗೊಂಡಿರುವ ಶಿಬಿರ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ.

‘ಆಟಗಾರರ ಫಿಟ್‌ನೆಸ್‌ಗೆ ಆದ್ಯತೆ ನೀಡುವುದು ಶಿಬಿರದ ಮುಖ್ಯ ಉದ್ದೇಶ. ಅತ್ಯುನ್ನತ ಮಟ್ಟದ ಸಾಮರ್ಥ್ಯ ಪ್ರದರ್ಶಿಸಲು ಶಿಬಿರದಲ್ಲಿ ಆಟಗಾರ್ತಿಯರನ್ನು ಸಿದ್ಧಗೊಳಿಸಲಾಗುವುದು’ ಎಂದು ಸೈನಿ ತಿಳಿಸಿದರು.

ADVERTISEMENT

ನ್ಯೂಜಿಲೆಂಡ್ ಮತ್ತು ಆತಿಥೇಯ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಪಾಲ್ಗೊಳ್ಳುವ ಇತರ ಎರಡು ತಂಡಗಳು.

ಶಿಬಿರಕ್ಕೆ ಆಯ್ಕೆಯಾದವರು: ಗೋಲ್‌ಕೀಪರ್‌ಗಳು: ರಶನ್‌ಪ್ರೀತ್ ಕೌರ್‌, ಖುಷ್ಬೂ, ಎಫ್‌.ರಮೆಂಗ್ವಾಯ್‌; ಡಿಫೆಂಡರ್‌ಗಳು: ಪ್ರಿಯಾಂಕ, ಸಿಮ್ರಾನ್, ಮರಿನಾ ಲಾಲ್‌ರಂಗ್‌ಕಿ, ಗಗನ್‌ದೀಪ್ ಕೌರ್, ಇಶಿಕಾ ಚೌಧರಿ, ಜೋತಿಕಾ ಕಾಳ್ಸಿ, ಸುಮಿತಾ ಅಕ್ಷತಾ ದೇಖಾಲೆ, ಉಶಾ, ಪರಿಣೀತ್ ಕೌರ್‌; ಮಿಡ್‌ಫೀಲ್ಡರ್ಸ್‌: ಬಲಜೀತ್ ಕೌರ್‌, ಮಜರಿಯಾನ ಕುಜೂರ್‌, ಕಿರಣ್‌, ಪ್ರಭುಲೀನ್ ಕೌರ್‌, ಪ್ರೀತಿ, ಅಜ್ಮೀನಾ ಕುಜೂರ್‌, ವೈಷ್ಣವಿ ಫಾಲ್ಕೆ, ಕವಿತಾ ಬಗ್ದಿ, ಬಲ್ಜಿಂದರ್ ಕೌರ್, ಸುಷ್ಮಾ ಕುಮಾರಿ; ಫಾರ್ವರ್ಡ್‌: ಮುಮ್ತಾಜ್ ಖಾನ್, ಬ್ಯೂಟಿ ಡಂಗ್‌ ಡಂಗ್‌, ಗುರ್ಮೈಲ್ ಕೌರ್‌, ದೀಪಿಕಾ, ಲಾಲ್‌ರಿಂಡಿಂಕಿ, ಜೀವನ್ ಕಿಶೋರಿ ಟೊಪ್ಪೊ, ಋತುಜಾ ಪಿಸಾಲ್‌, ಸಂಗೀತಾ ಕುಮಾರಿ, ಯೋಗಿತಾ ಬೋರಾ, ಅನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.