ADVERTISEMENT

ಟಿಟಿ: ತೃಪ್ತಿ, ಅದಿತಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 19:51 IST
Last Updated 29 ಸೆಪ್ಟೆಂಬರ್ 2018, 19:51 IST
ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಟೇಬಲ್‌ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಅದಿತಿ ಪಿ. ಜೋಶಿ, ತೃಪ್ತಿ ಪುರೋಹಿತ್‌, ಸಮ್ಯಖ್‌ ಕಶ್ಯಪ್‌
ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಟೇಬಲ್‌ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಅದಿತಿ ಪಿ. ಜೋಶಿ, ತೃಪ್ತಿ ಪುರೋಹಿತ್‌, ಸಮ್ಯಖ್‌ ಕಶ್ಯಪ್‌   

ಹುಬ್ಬಳ್ಳಿ: ಎಂಎಸ್‌ಎಸ್‌ ಅಕಾಡೆಮಿ ಪ್ರತಿನಿಧಿಸುವ ತೃಪ್ತಿ ಪುರೋಹಿತ್‌ ಮತ್ತು ಬೆಂಗಳೂರಿನ ಜೋಶಿ ಅಕಾಡೆಮಿಯ ಅದಿತಿ ಜೋಶಿ ಅವರು ಧಾರವಾಡದಲ್ಲಿ ನಡೆಯುತ್ತಿರುವ ಕಾಸ್ಮಸ್‌ ಕ್ಲಬ್‌ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಕ್ಲಬ್‌ನಲ್ಲಿ ಶನಿವಾರ ನಡೆದ ಸಬ್‌ ಜೂನಿಯರ್‌ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ತೃಪ್ತಿ 8–11, 9-11, 11–7, 11–3, 11–3ರಲ್ಲಿ ಸ್ಕೈಸ್‌ ಕ್ಲಬ್‌ನ ಸಹನಾ ಎಚ್‌. ಮೂರ್ತಿ ಎದುರು ಜಯ ಪಡೆದರು.

ಇದೇ ವಿಭಾಗದ ಬಾಲಕರ ಫೈನಲ್‌ನಲ್ಲಿ ಬಿಎನ್‌ಎಂ ಕ್ಲಬ್‌ನ ಸಮ್ಯಖ್‌ ಕಶ್ಯಪ್‌ 11–5, 11–4, 12–10ರಲ್ಲಿ ಎಂಎಸ್‌ಎಸ್ ಅಕಾಡೆಮಿಯ ರೋಹಿತ್‌ ಶಂಕರ್ ಎದುರು ಜಯಿಸಿದರು.

ADVERTISEMENT

ಜೂನಿಯರ್‌ ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಅದಿತಿ 12–10, 11–4, 6.11, 3–11, 9–11, 11–5, 11–8ರಲ್ಲಿ ಎಂಪಿ ಅಕಾಡೆಮಿಯ ಎಸ್‌. ಕಾವ್ಯಾ ಎದುರು ಜಯ ಸಾಧಿಸಿ ಪ್ರಶಸ್ತಿ ಪಡೆದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಅದಿತಿ 11–6, 11–7, 11–9, 13–11ರಲ್ಲಿ ವಿ. ಸ್ಮೃತಿ ಮೇಲೂ, ಕಾವ್ಯಾ 11–8, 11–9, 11-1, 12-1ರಲ್ಲಿ ತೃಪ್ತಿ ಪುರೋಹಿತ್‌ ಎದುರೂ ಗೆಲುವು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.