ಮಡಿಕೇರಿ: ಮಂಡೇಪಂಡ, ಅಳಂಗಂಡ ಹಾಗೂ ಪರದಂಡ ತಂಡಗಳು ಗುರುವಾರ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ‘ಮುದ್ದಂಡ ಕಪ್’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.
ಮಂಡೇಪಂಡ 6-0ಯಿಂದ ಮಾಚಂಡ ವಿರುದ್ಧ, ಅಳಂಗಂಡ 6-1ರಿಂದ ಚಪ್ಪಂಡ ವಿರುದ್ಧ, ಪರದಂಡ 5-0ಯಿಂದ ಬೊಪ್ಪಂಡ ತಂಡದ ವಿರುದ್ಧ ಗೆದ್ದವು.
ಮೇಚಿಯಂಡ 2-1ರಿಂದ ಮಾಚಿಮಾಡ ವಿರುದ್ಧ; ಕೂತಂಡ 4-0ಯಿಂದ ಮಂಡೀರ (ನೆಲಜಿ) ವಿರುದ್ಧ; ವಾಟೇರಿರ 4-0ಯಿಂದ ಬಾಚಿನಾಡಂಡ ವಿರುದ್ಧ; ಕೇಚೇಟಿರ (ಕಡಗದಾಳು) 3-0ಯಿಂದ ಬಡ್ಡೀರ ವಿರುದ್ಧ; ಮಂಡೇಡ 1-0ಯಿಂದ ಮಂದನೆರವಂಡ ವಿರುದ್ಧ; ಮೂಕಳಮಾಡ 3-0ಯಿಂದ ಕಾಂಡೇರ ವಿರುದ್ಧ; ಚೆರುಮಾಡಂಡ 3-1ಯಿಂದ ಚೌರೀರ (ಹೊದವಾಡ) ವಿರುದ್ಧ; ಮುರುವಂಡ 4-0ಯಿಂದ ಚೆರಿಯಪಂಡ ವಿರುದ್ಧ ಜಯ ಗಳಿಸಿದವು.
ಅಜ್ಜಿನಂಡ 3-1ರಿಂದ ಬೈರೆಟೀರ ವಿರುದ್ಧ; ಮುಡ್ಯೋಳಂಡ 3-1ಯಿಂದ ಚೌರೀರ (ಹೊದ್ದೂರು) ವಿರುದ್ಧ; ಪಾಡೆಯಂಡ 4-0ಯಿಂದ ಕರ್ತಚ್ಚಿರ ವಿರುದ್ಧ; ಮೈಂದಪಂಡ 2-0ಯಿಂದ ಬಟ್ಟೀರ ವಿರುದ್ಧ; ಮಲ್ಲಮಾಡ 2-0ಯಿಂದ ಆಪಾಡಂಡ ವಿರುದ್ಧ ಗೆದ್ದವು.
ಟೈ ಬ್ರೇಕರ್ ಹಣಾಹಣಿಯಲ್ಲಿ ಮದ್ರೀರ 4-2ರಿಂದ ಜಮ್ಮಡ ವಿರುದ್ಧ, ಕೇಳಪಂಡ 4-2ರಿಂದ ಬೊಳ್ಳಂಡ ವಿರುದ್ಧ, ಅಣ್ಣಾಡಿಯಂಡ 4-1ರಿಂದ ದಾಸಂಡ ವಿರುದ್ಧ ಜಯ ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.