ADVERTISEMENT

ಸ್ವಿಟ್ಜರ್ಲೆಂಡ್ ನ್ಯಾಯಾಲಯದ ತೀರ್ಪು ವಿರುದ್ಧ ಹೋರಾಟ: ಐಎಎಎಫ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:13 IST
Last Updated 5 ಜೂನ್ 2019, 19:13 IST

ಪ್ಯಾರಿಸ್ (ಎಎಫ್‌ಪಿ): ಪುರುಷ ಹಾರ್ಮೋನ್ ಪ್ರಮಾಣ ಹೆಚ್ಚು ಇರುವ ಮಹಿಳಾ ಅಥ್ಲೀಟ್‌ಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಸ್ವಿಟ್ಜರ್ಲೆಂಡ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೋರಾಡಲಾಗುವುದು ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ತಿಳಿಸಿದೆ.

ದಕ್ಷಿಣ ಆಫ್ರಿಕಾದ ಕಾಸ್ಟರ್ ಸೆಮೆನ್ಯಾ ಒಳಗೊಂಡಂತೆ ಕೆಲವು ಮಹಿಳಾ ಅಥ್ಲೀಟ್‌ಗಳು 800 ಮೀಟರ್ಸ್ ಓಟದಲ್ಲಿ ಪಾಲ್ಗೊಳ್ಳದಂತೆ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ತಡೆಯೊಡ್ಡಿತ್ತು. ಇದನ್ನು ಸೆಮೆನ್ಯಾ ಸ್ವಿಟ್ಜರ್ಲೆಂಡ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಸೋಮವಾರ ಈ ಕುರಿತು ನ್ಯಾಯಾಲಯ ತೀರ್ಪು ನೀಡಿತ್ತು.

‘ಸಮಾನ ಹಕ್ಕುಗಳಿಗಾಗಿ ಫೆಡರೇಷನ್ ನಿರಂತರ ಹೋರಾಟ ನಡೆಸಲಿದೆ. ತೀರ್ಪು ಮರುಪರಿಶೀಲನೆ ಆಗುವವರೆಗೂ ಇದು ಮುಂದುವರಿಯಲಿದೆ’ ಎಂದು ಪದಾಧಿಕಾರಿಗಳು ತಿಳಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.