ADVERTISEMENT

ಹಾಕಿ: ಶೂಟೌಟ್‌ನಲ್ಲಿ ಗೆದ್ದ ಭಾರತ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 20:13 IST
Last Updated 22 ಫೆಬ್ರುವರಿ 2020, 20:13 IST

ಭುವನೇಶ್ವರ: ಪ್ರಬಲ ಆಸ್ಟ್ರೇಲಿಯಾವನ್ನು ಪೆನಾಲ್ಟಿ ಶೂಟೌಟ್‌ ಮುಖಾಂತರ ಸೋಲಿಸಿದ ಭಾರತ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯದಲ್ಲಿ ಬೋನಸ್‌ ಪಾಯಿಂಟ್‌ ಸಹ ಪಡೆಯಿತು.

ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ಎರಡನೇ ಲೆಗ್‌ ಪಂದ್ಯದ ನಿಗದಿ ಅವಧಿಯ ಆಟ ಮುಗಿದಾಗ ಸ್ಕೋರ್‌ 2–2 ಗೋಲುಗಳಿಂದ ಸಮ ನಾಗಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 3–1 ಅಂತರದಿಂದ ಜಯ ಗಳಿ ಸಿತು. ಹರ್ಮನ್‌ಪ್ರೀತ್‌ ಸಿಂಗ್‌ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದರು. ಭಾರತ ಈ ಪಂದ್ಯಿಂದ ಮೂರು ಪಾಯಿಂಟ್‌, ಆಸ್ಟ್ರೇಲಿಯಾ ಒಂದು ಪಾಯಿಂಟ್‌ ಪಡೆಯಿತು.

ಶುಕ್ರವಾರ ನಡೆದ ಮೊದಲ ಲೆಗ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 4–3 ಗೋಲುಗಳಿಂದ ಜಯಗಳಿಸಿತ್ತು.

ADVERTISEMENT

ಆರಂಭದಿಂದಲೇ ದಾಳಿಗಿಳಿದ ಆಸ್ಟ್ರೇಲಿಯಾ ಎಂಟನೇ ನಿಮಿಷ, ಲಾಚ್ಲನ್‌ ಶಾರ್ಪ್‌ ಮೂಲಕ ಎರಡನೇ ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಗುರಿತಲುಪಿಸಿತ್ತು. ಆದರೆ ಗೋಲ್‌ಕೀಪರ್‌ ಶ್ರೀಜೇಶ್‌ ಅವರನ್ನು ಅಡ್ಡಿಪಡಿಸಿ ಗೋಲು ಹೊಡೆದಿದೆ ಎಂಬ ಭಾರತದ ಮನವಿಯನ್ನು ಮರುಪ್ರಸಾರ ಪರಿಶೀಲನೆ ನಂತರ ಪುರಸ್ಕರಿಸಲಾಯಿತು.

23ನೇ ನಿಮಿಷ ಟ್ರೆಂಟ್‌ ಮಿಟ್ಟೆನ್‌ ಆಸ್ಟ್ರೇಲಿಯಾ ತಂಡಕ್ಕೆ ಮುನ್ನಡೆ ಒದಗಿಸಿ ದರು. ಆದರೆ ಎರಡು ನಿಮಿಷಗಳ ಅಂತರದಲ್ಲಿ (25 ಮತ್ತು 27ನೇ ನಿಮಿಷ) ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದ ರೂಪಿಂದರ್‌ ಪಾಲ್‌ ಸಿಂಗ್‌ ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ ಭಾರತಕ್ಕೆ 2–1 ಮುನ್ನಡೆ ಒದಗಿಸಿದರು. ಅಂತಿಮ ಕ್ವಾರ್ಟರ್‌ನ ಆರಂಭದಲ್ಲಿ (46ನೇ ನಿಮಿಷ) ಆಸ್ಟ್ರೇಲಿಯಾ ತಂಡ ನಾಯಕ ಆರಾನ್‌ ಜಲೆವ್‌ಸ್ಕಿ ಮೂಲಕ ಸ್ಕೋರ್‌ ಸಮ ಮಾಡಿಕೊಂಡಿತು.

ಶೂಟೌಟ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರು ವಿಫಲರಾದರು. ಭಾರತದ ಪರ ಹರ್ಮನ್‌ಪ್ರೀತ್‌ ಸಿಂಗ್‌, ವಿವೇಕ್‌ ಪ್ರಸಾದ್ ಮತ್ತು ಲಲಿತ್‌ ಉಪಾಧ್ಯಾಯ ಚೆಂಡನ್ನು ಗುರಿಮಟ್ಟಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಆರಂಭದಿಂದಲೇ ದಾಳಿಗಿಳಿದ ಆಸ್ಟ್ರೇಲಿಯಾ ಎಂಟನೇ ನಿಮಿಷ, ಲಾಚ್ಲನ್‌ ಶಾರ್ಪ್‌ ಮೂಲಕ ಎರಡನೇ ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಗುರಿತಲುಪಿಸಿತ್ತು. ಆದರೆ ಗೋಲ್‌ಕೀಪರ್‌ ಶ್ರೀಜೇಶ್‌ ಅವರನ್ನು ಅಡ್ಡಿಪಡಿಸಿ ಗೋಲು ಹೊಡೆದಿದೆ ಎಂಬ ಭಾರತದ ಮನವಿಯನ್ನು ಮರುಪ್ರಸಾರ ಪರಿಶೀಲನೆ ನಂತರ ಪುರಸ್ಕರಿಸಲಾಯಿತು.ಳು ಆರು ಪಂದ್ಯಗಳಿಂದ ತಲಾ 10 ಪಾಯಿಂಟ್‌ ಪಡೆದಿವೆ. ಗೋಲು ವ್ಯತ್ಯಾಸದಲ್ಲಿ ಆಸ್ಟ್ರೇಲಿಯಾ ಮುಂದಿದೆ.

ಭಾರತ ಮುಂದಿನ ಪಂದ್ಯಗಳಲ್ಲಿ ಜರ್ಮನಿ (ಏ. 25 ಮತ್ತು 26) ಮತ್ತು ಬ್ರಿಟನ್‌ (ಮೇ 2 ಮತ್ತು 3) ವಿರುದ್ಧ ಆ ದೇಶಗಳಲ್ಲಿ ಆಡಲಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.