ನವದೆಹಲಿ: ಹಿರಿಯ ಆಟಗಾರರಿಗಾಗಿ ಮೊದಲ ಬಾರಿ ಹಾಕಿ ಇಂಡಿಯಾವು ಇದೇ ಮೊದಲ ಬಾರಿ ಮಾಸ್ಟರ್ಸ್ ಕಪ್ ಟೂರ್ನಿ ನಡೆಸುತ್ತಿದ್ದು, ಇದು ಚೆನ್ನೈನಲ್ಲಿ ಜೂನ್ 18 ರಿಂದ 27ರವರೆಗೆ ನಡೆಯಲಿದೆ.
ಶುಕ್ರವಾರ ಈ ಟೂರ್ನಿಯ ಸ್ಥಳ ಮತ್ತು ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಇದರಲ್ಲಿ ಮಹಿಳಾ ಮತ್ತು ಪುರುಷರ ಹಾಕಿಪಟುಗಳಿಗೆ ಟೂರ್ನಿ ನಡೆಯಲಿದೆ. ಲೀಗ್ ನಿಯಮಗಳ ಪ್ರಕಾರ 40 ವರ್ಷ ಮೇಲ್ಪಟ್ಟ ಆಟಗಾರರು ಮತ್ತು 35 ವರ್ಷ ಮೇಲ್ಪಟ್ಟ ಆಟಗಾರ್ತಿಯರು ಪಾಲ್ಗೊಳ್ಳಲು ಅರ್ಹರು.
ಎರಡೂ ವಿಭಾಗಗಳ ಆಟಗಾರರ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಭಾಗವಹಿಸುವ ಹಾಕಿ ಆಟಗಾರರು ಆಯಾ ರಾಜ್ಯ ಘಟಕಗಳಲ್ಲಿ ನೋಂದಾಯಿಸಿಕೊಂಡಿರಬೇಕು ಎಂದು ಹಾಕಿ ಇಂಡಿಯಾ ಹೇಳಿಕೆ ತಿಳಿಸಿದೆ.
ಲೀಗ್–ಕಂ–ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ತಂಡಗಳನ್ನು ಭಾಗವಹಿಸುವ ತಂಡಗಳ ಸಂಖ್ಯೆಗಳ ಆಧಾರದಲ್ಲಿ ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಆಡಲು ತವಕದಿಂದ ಇರುವುದಾಗಿ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಅಸುಂತಾ ಲಾಕ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.