ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಭಾರತ ತಂಡ ಸೆಮಿಫೈನಲ್‌ನಲ್ಲಿ 56–18 ಪಾಯಿಂಟ್‌ಗಳಿಂದ ನೇಪಾಳ ತಂಡವನ್ನು ಸೋಲಿಸಿ, ಇರಾನ್‌ನ ಟೆಹರಾನ್‌ನಲ್ಲಿ ನಡೆಯುತ್ತಿರುವ ಆರನೇ ಏಷ್ಯನ್ ಮಹಿಳಾ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿತು.
ಸೊನಾಲಿ ವಿಷ್ಣು ಶಿಂಗಟೆ ನೇತೃತ್ವದ ಭಾರತ ವನಿತೆಯರ ತಂಡ ಶನಿವಾರ ನಡೆಯುವ ಫೈನಲ್‌ನಲ್ಲಿ ಆತಿಥೇಯ ಇರಾನ್ ತಂಡದ ವಿರುದ್ಧ ಆಡಲಿದೆ. ಇರಾನ್ ಇನ್ನೊಂದು ಸೆಮಿಫೈನಲ್‌ನಲ್ಲಿ 41–18 ರಿಂದ ಬಾಂಗ್ಲಾದೇಶ ತಂಡದ ಸವಾಲನ್ನು ಸುಲಭವಾಗಿ ಬದಿಗೊತ್ತಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.