ADVERTISEMENT

ಹಾಕಿ ಫೆಡರೇಷನ್‌ ರ‍್ಯಾಂಕಿಂಗ್‌: ಐದನೇ ಸ್ಥಾನ್ಕಕೇರಿದ ಭಾರತ

ಪಿಟಿಐ
Published 17 ಜುಲೈ 2018, 18:47 IST
Last Updated 17 ಜುಲೈ 2018, 18:47 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಮಂಗಳವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿಭಾರತದ ಪುರುಷರ ಹಾಕಿ ತಂಡವು ಐದನೇ ಸ್ಥಾನಕ್ಕೇರಿದೆ.

ಇತ್ತೀಚೆಗೆ ನಡೆದ ಚಾಂಪಿಯನ್ಸ್‌ ಟ್ರೋಫಿ ಹಾಕಿಯಲ್ಲಿ ರನ್ನರ್‌ ಅಪ್ ಆಗಿದ್ದ ಭಾರತ ತಂಡವು ಒಂದು ಸ್ಥಾನ ಬಡ್ತಿ ಹೊಂದಿದೆ. ಅದು ತನ್ನ ಖಾತೆಯಲ್ಲಿ ಒಟ್ಟು 1484 ಪಾಯಿಂಟ್ಸ್‌ಗಳನ್ನು ಹೊಂದಿದೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ತಂಡವು 1906 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 1883 ಪಾಯಿಂಟ್ಸ್‌ಗಳೊಂದಿಗೆ ಅರ್ಜೆಂಟೀನಾ, 1709 ಪಾಯಿಂಟ್ಸ್‌ಗಳೊಂದಿಗೆ ಬೆಲ್ಜಿಯಂ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. 1654 ಪಾಯಿಂಟ್ಸ್‌ ಹೊಂದಿರುವ ನೆದರ್ಲೆಂಡ್ಸ್‌ ತಂಡವು ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.

ADVERTISEMENT

ಆರನೇ ಸ್ಥಾನದಲ್ಲಿರುವ ಜರ್ಮನಿ ತಂಡವು 1456 ಪಾಯಿಂಟ್ಸ್‌ಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.