ADVERTISEMENT

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಜೊನಾಥನ್ ಕ್ರಿಸ್ಟಿ ಚಾಂಪಿಯನ್‌

ಪಿಟಿಐ
Published 18 ಮಾರ್ಚ್ 2024, 18:29 IST
Last Updated 18 ಮಾರ್ಚ್ 2024, 18:29 IST
<div class="paragraphs"><p>ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ </p></div>

ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ

   

ಬರ್ಮಿಂಗ್‌ಹ್ಯಾಮ್ : ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌‌ ಫೈನಲ್‌ನಲ್ಲಿ 21-15, 21-14 ರಿಂದ ಸ್ವದೇಶದ ಆ್ಯಂಟನಿ ಸಿನಿಸುಕ್ ಗಿಂಟಿಂಗ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಕೆರೊಲಿನಾ ಮರಿನ್‌ ಚಾಂಪಿಯನ್‌ ಆದರು.

26 ವರ್ಷದ ಕ್ರಿಸ್ಟಿ ಅವರಿಗೆ ಇದು ಸೂಪರ್‌ 1000 ಟೂರ್ನಿಯಲ್ಲಿ ದೊರೆತ ಚೊಚ್ಚಲ ಪ್ರಶಸ್ತಿಯಾಗಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಅವರು 2019ರ ಬಳಿಕ ಇದೇ ಮೊದಲ ಬಾರಿ ತಮ್ಮ ಆಪ್ತ ಸ್ನೇಹಿತ ಆ್ಯಂಟನಿ ಅವರನ್ನು ಮಣಿಸಿದರು.

ADVERTISEMENT

ಪುರುಷರ ಡಬಲ್ಸ್ ಫೈನಲ್‌ನಲ್ಲೂ ಇಂಡೊನೇಷ್ಯಾದ ಜೋಡಿ ಪ್ರಶಸ್ತಿ ಗೆದ್ದಿತು. ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಜೋಡಿಯು 21-16, 21-16 ರಿಂದ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ವಿರುದ್ಧ ಗೆಲುವು ಸಾಧಿಸಿತು.

ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ 30 ವರ್ಷದ ಮರಿನ್‌ 26–24, 11–1 ರಿಂದ ಮುನ್ನಡೆಯಲ್ಲಿದ್ದಾಗ ಜಪಾನ್‌ನ ಅಕಾನೆ ಯಮಗುಚಿ ಅವರು ಸೊಂಟದ ನೋವಿನಿಂದಾಗಿ ಪಂದ್ಯದಿಂದ ಹಿಂದೆ ಸರಿದರು. 2015ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದ ಮರಿನ್‌, ಒಂಬತ್ತು ವರ್ಷಗಳ ಬಳಿಕ ಮತ್ತೆ ಕಿರೀಟ ಧರಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ದಕ್ಷಿಣ ಕೊರಿಯಾದ ಬೇಕ್ ಹಾ-ನಾ ಮತ್ತು ಲೀ ಸೊ-ಹೀ ಜೋಡಿಯು 21-19, 11-21, 21-17 ರಿಂದ 2022ರ ಚಾಂಪಿಯನ್‌ಗಳಾದ ಜಪಾನ್‌ನ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿದಾ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿತು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಚೀನಾದ ಚೀನಾದ ಝೆಂಗ್ ಸಿವೆ ಮತ್ತು ಹುವಾಂಗ್ ಯಾಕಿಯೊಂಗ್ ಚಾಂಪಿಯನ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.