ಹಾಕಿ
ಬೆಂಗಳೂರು: ವಿದ್ಯಾಶಿಲ್ಪ ಅಕಾಡೆಮಿ ತಂಡ, ಸೇಂಟ್ಸ್ ಜೋಸೆಫ್ಸ್ ಬಾಲಕರ ಹೈಸ್ಕೂಲ್ ಆಶ್ರಯದ ಅಂತರ ಶಾಲಾ ಹಾಕಿ ಟೂರ್ನಿಯಲ್ಲಿ ಗುರುವಾರ 17 ವರ್ಷದೊಳಗಿನವರ ಮತ್ತು 14 ವರ್ಷದೊಳಗಿನವರ ವಿಭಾಗದಲ್ಲಿ ವಿಜೇತರಾಗಿ ‘ಪ್ರಶಸ್ತಿ ಡಬಲ್ಸ್’ ಸಾಧಿಸಿತು.
14 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಆತಿಥೇಯ ಸೇಂಟ್ ಜೋಸೆಫ್ಸ್ ಬಾಲಕರ ಹೈಸ್ಕೂಲ್ ತಂಡವನ್ನು 1–0 ಗೋಲಿನಿಂದ ಮಣಿಸಿದ ವಿದ್ಯಾಶಿಲ್ಪ ಅಕಾಡೆಮಿ ತಂಡವು ಫಾ.ಎರಿಕ್ ವಾಝ್ ಸ್ಮರಣಾರ್ಥ ಪ್ರಶಸ್ತಿ ಗೆದ್ದುಕೊಂಡಿತು.
ನಂತರ 17 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ 0–2 ಹಿನ್ನಡೆಯಿಂದ ಅಮೋಘ ರೀತಿಯಲ್ಲಿ ಚೇತರಿಸಿಕೊಂಡು 3–2 ಗೋಲುಗಳಿಂದ ಚಿನ್ಮಯ ವಿದ್ಯಾಲಯ ತಂಡವನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.