ADVERTISEMENT

ಕಬಡ್ಡಿ: ನಾಗನೂರ ತಂಡ ಪ್ರಥಮ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 15:42 IST
Last Updated 5 ಅಕ್ಟೋಬರ್ 2022, 15:42 IST
ಮುಗಳಖೋಡದಲ್ಲಿ ದಸರಾ ಹಬ್ಬದ ಪ್ರಯುಕ್ತ ನಡೆದ ಕಬಡ್ಡಿ ಟೂರ್ನಿಯಲ್ಲಿ ವಿಜೇತ ತಂಡಗಳಿಗೆ ಬುಧವಾರ ಬಹುಮಾನ ನೀಡಲಾಯಿತು
ಮುಗಳಖೋಡದಲ್ಲಿ ದಸರಾ ಹಬ್ಬದ ಪ್ರಯುಕ್ತ ನಡೆದ ಕಬಡ್ಡಿ ಟೂರ್ನಿಯಲ್ಲಿ ವಿಜೇತ ತಂಡಗಳಿಗೆ ಬುಧವಾರ ಬಹುಮಾನ ನೀಡಲಾಯಿತು   

ಮುಗಳಖೋಡ: ದಸರಾ ಹಬ್ಬದ ಪ್ರಯುಕ್ತ ಪಟ್ಟಣದ ಜೈ ಭೀಮ್ ಕಮಿಟಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ನಡೆದ ಕಬಡ್ಡಿ ಟೂರ್ನಿಯಲ್ಲಿ ನಾಗನೂರಿನ ಮಹಾಲಕ್ಷ್ಮಿ ಸ್ಫೋರ್ಟ್ಸ್ ಕ್ಲಬ್ ಪ್ರಥಮ ಸ್ಥಾನ ಪಡೆಯಿತು.

ಒಟ್ಟು 36 ಕಬಡ್ಡಿ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನ ಪಡೆದ ತಂಡಕ್ಕೆ ₹10,001 ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ದ್ವಿತೀಯ ಬಹುಮಾನ ₹7,001 ನಗದನ್ನು ಕಣದಾಳ ಗ್ರಾಮದ ಜೈ ಶ್ರೀರಾಮ್ ಕಬಡ್ಡಿ, ತೃತೀಯ ಬಹುಮಾನವನ್ನು ಕೆಸರಗೊಪ್ಪ ಗ್ರಾಮದ ನೇತಾಜಿ ಕಬಡ್ಡಿ ತಂಡ ಪಡೆದುಕೊಂಡಿತು. ಚತುರ್ಥ ಬಹುಮಾನವನ್ನು ಶಿವಾಪುರ ಗ್ರಾಮದ ಮಹಾಲಕ್ಷ್ಮಿ ಕಬಡ್ಡಿ ತಂಡ ತನ್ನದಾಗಿಸಿಕೊಂಡಿತು.

ನಿರ್ಣಾಯಕರಾಗಿ ಎಸ್.ಪಿ. ಖೇತಗೌಡರ, ಎಸ್.ಎಸ್. ಕೊಪ್ಪದ, ಬಿ.ಕೆ.ಕುರಾಡೆ, ಕೆ.ಆರ್. ಖೇತಗೌಡರ, ಬಿ.ಎಸ್. ದುಂಡಗಿ, ಡಿ.ಜಿ. ಜಮಖಂಡಿ, ಆಟದ ಮೈದಾನದ ನಿರ್ವಾಹಕರಾಗಿ ಶ್ರೀಧರ ಬಾಬಣ್ಣವರ, ಮಲ್ಲು ಕನಗಾಂವ, ಸಂಜು ತಳವಾರ, ಸಿದ್ದು ಯಡವನ್ನವರ, ಪ್ರವೀಣ ಭಜಂತ್ರಿ ಹಾಗೂ ಯು.ಎಸ್. ಕಲಾಲ್‌ ನಿರ್ವಹಿಸಿದರು.

ADVERTISEMENT

ಇದಕ್ಕೂ ಮುನ್ನ ಪುರಸಭೆ ಸದಸ್ಯ ರಮೇಶ ಎಡವನ್ನವರ ಚಾಲನೆ ನೀಡಿದರು. ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಪಾಟೀಲ ಪ್ರಥಮ, ಪುರಸಭೆ ಮಾಜಿ ಸದಸ್ಯ ಗೌಡಪ್ಪಗೌಡ ಖೇತಗೌಡರ ದ್ವಿತೀಯ, ಕಾಂಗ್ರೆಸ್ ಮುಖಂಡ ಗಿರೀಶ ಧರ್ಮಟ್ಟಿ ತೃತೀಯ ಹಾಗೂ ಅರಭಾವಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ಅರಭಾವಿ,ಯಲ್ಲಾಲಿಂಗ ಕುರಿಮನಿ ನಾಲ್ಕನೇ ಬಹುಮಾನದ ಮೊತ್ತ ನೀಡಿದರು. ಟ್ರೋಫಿಗಳನ್ನು ಇಂಡಿಯನ್ ಆರ್ಮಿಯ ಸಮ್ಮೇದ ಬಾಬಣ್ಣವರ ನೀಡಿದರು.

ದಾಂಡೇಲಿ ಪಿಎಸ್ಐ ಸುನಿಲ ಸಾತಪ್ಪ ಹುಲ್ಲೋಳ್ಳಿ, ಪುರಸಭೆ ಸದಸ್ಯ ಮಹಾಂತೇಶ ಯರಡತ್ತಿ, ಗಿರೀಶ ಧರ್ಮಟ್ಟಿ, ಸಂಗಯ್ಯ ಹಿರೇಮಠ ಸಂಜು ಬಾಬಣ್ಣವರ, ಎಎಸ್‌ಐ ಎಚ್.ಡಿ. ಭೋಜನ್ನವರ ಹಾಗೂ ಮುಗಳಖೋಡ ಪಟ್ಟಣದ ಗುರು-ಹಿರಿಯರು, ಜೈ ಭೀಮ್ ಕಮಿಟಿ ಸದಸ್ಯರು ಹಾಜರಿದ್ದರು. ಸಂತೋಷ ಮುಗಳಿ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಿದರು. ಶಿಕ್ಷಕ ರಾಜಶೇಖರ ಅಸೋಧೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.