ಬೆಂಗಳೂರು: ಕರ್ನಾಟಕದ ಸಿದ್ಧಾಂತ್ ಅವರು ಗುಜರಾತ್‌ನ ವಡೋದರಾದಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ 13 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.
ಸಿದ್ಧಾಂತ್ ಫೈನಲ್‌ನಲ್ಲಿ 11-9, 12-10, 11-7ರಿಂದ ಪಶ್ಚಿಮ ಬಂಗಾಳದ ರಾಜ್‌ದೀಪ್ ಬಿಸ್ವಾಸ್ ಅವರನ್ನು ಮಣಿಸಿದರು.
11 ವರ್ಷದೊಳಗಿನ ಸಿಂಗಲ್ಸ್‌ನಲ್ಲಿ ಕರ್ನಾಟಕದ ಅರ್ಣವ್ ಮಿಥುನ್ ಮತ್ತು ಸಾಕ್ಷ್ಯಾ ಸಂತೋಷ್ ರನ್ನರ್ಸ್ ಅಪ್ ಆದರು. ಬಾಲಕರ ವಿಭಾಗದ ಫೈನಲ್‌ನಲ್ಲಿ ರಾಜ್‌ದೀಪ್ 11-8, 6-11, 11-3, 9-11, 11-6ರಿಂದ ಅರ್ಣವ್ ಅವರನ್ನು ಸೋಲಿಸಿದರು. ಬಾಲಕಿಯರ ಫೈನಲ್‌ನಲ್ಲಿ ಮಹಾರಾಷ್ಟ್ರದ ಆದ್ಯಾ ಬಹೇತಿ 11-4, 9-11, 11-7, 13-11ರಿಂದ ಸಾಕ್ಷ್ಯಾ ಅವರನ್ನು ಹಿಮ್ಮೆಟ್ಟಿಸಿದರು.
ಬೆಂಗಳೂರು: ರೂಟ್ಸ್ ಎಫ್‌ಸಿ ತಂಡವು ಶುಕ್ರವಾರ ಕೆಎಸ್‌ಎಫ್‌ಎ ಕರ್ನಾಟಕ ಮಹಿಳೆಯರ ಫುಟ್‌ಬಾಲ್ ಲೀಗ್‌ನ ಪಂದ್ಯದಲ್ಲಿ 1–0 ಗೋಲಿನಿಂದ ಯುನೈಟೆಡ್ ಎಫ್‌ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಇತರ ಪಂದ್ಯಗಳಲ್ಲಿ ಬೆಂಗಳೂರು ಎಫ್‌ಸಿ 1–0ಯಿಂದ ಮಾತೃ ಪ್ರತಿಷ್ಠಾನ ಎಫ್‌ಸಿ ವಿರುದ್ಧ; ಮಿಸಾಕಾ ಯುನೈಟೆಡ್ ಎಫ್‌ಸಿ 8–1ರಿಂದ ಪಿಂಕ್ ಪ್ಯಾಂಥರ್ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.