ADVERTISEMENT

ಹಾಕಿ: ನಿಶುಗೆ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 25 ಮೇ 2019, 15:52 IST
Last Updated 25 ಮೇ 2019, 15:52 IST

ಬೆಂಗಳೂರು: ಎಸ್‌.ಎಸ್‌.ನಿಶು ಅವರು ಇದೇ 27ರಿಂದ ಜೂನ್‌ 7ರವರೆಗೆ ಹರಿಯಾಣದಲ್ಲಿ ನಡೆಯುವ ರಾಷ್ಟ್ರೀಯ ಸಬ್‌ ಜೂನಿಯರ್‌ (‘ಎ’ ಡಿವಿಷನ್‌) ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ತಂಡವು ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಹರಿಯಾಣ, ಪಂಜಾಬ್‌, ಒಡಿಶಾ ಮತ್ತು ಬಿಹಾರ ತಂಡಗಳೂ ಇದೇ ಗುಂಪಿನಲ್ಲಿವೆ.

ತಂಡ ಇಂತಿದೆ: ಪಿ.ಎನ್‌.ಅರ್ಪಿತಾ ಮತ್ತು ಎಂ.ಎಸ್‌.ಸುಶ್ಮಿತಾ (ಇಬ್ಬರೂ ಗೋಲ್‌ಕೀಪರ್‌), ಎಚ್‌.ಪಿ.ಸಿಂಚನಾ, ಎಚ್‌.ಎ.ಅಪ್ಸರಾ, ಪಿ.ಜಿ.ದೇಚಮ್ಮ, ಬಿ.ಎಸ್‌.ಚಂದನ, ಬಿ.ಸುಫಾನ, ಪಿ.ಯು.ರಮ್ಯಾ, ಎಸ್‌.ಕೆ.ಸುಪ್ರಿತಾ, ಡಿ.ಎಂ.ಚೈತ್ರಾ, ಎಸ್‌.ಎಸ್‌.ನಿಶು (ನಾಯಕಿ), ಸಿ.ಎಂ.ಸಹನ, ಜೆ.ಚಂದನ, ಅನ್ನಪೂರ್ಣ ಕೆ.ಶೆರ್ವಾಡಿ, ಎಂ.ಎಂ.ಪದ್ಮಿನಿ, ಕಾವೇರಿ ಲೆಂಕಣ್ಣವರ್‌, ಬಿ.ಡಿ.ಗಾಯನ ಮತ್ತು ಬಿ.ಡಿ.ಗಗನ. ಕೋಚ್‌: ಬಿ.ಸಂಜಯ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.