ADVERTISEMENT

ಟಿ.ಟಿ: ಆಕಾಶ್‌, ಕರುಣಾ ಪ್ರಶಸ್ತಿ ಬೇಟೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 18:30 IST
Last Updated 9 ಆಗಸ್ಟ್ 2019, 18:30 IST
ಕರುಣಾ ಗಜೇಂದ್ರನ್‌ ಸರ್ವ್‌ ಮಾಡಲು ಮುಂದಾದ ಕ್ಷಣ –ಪ್ರಜಾವಾಣಿ ಚಿತ್ರ/ ಆರ್‌.ಶ್ರೀಕಂಠ ಶರ್ಮಾ
ಕರುಣಾ ಗಜೇಂದ್ರನ್‌ ಸರ್ವ್‌ ಮಾಡಲು ಮುಂದಾದ ಕ್ಷಣ –ಪ್ರಜಾವಾಣಿ ಚಿತ್ರ/ ಆರ್‌.ಶ್ರೀಕಂಠ ಶರ್ಮಾ   

ಬೆಂಗಳೂರು: ಅಮೋಘ ಆಟ ಆಡಿದ ಕೆ.ಜೆ.ಆಕಾಶ್‌ ಮತ್ತು ಕರುಣಾ ಗಜೇಂದ್ರನ್‌ ಅವರು ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿಯ ಬೇಟೆ ಮುಂದುವರಿಸಿದ್ದಾರೆ.

ಗುರುವಾರ ಜೂನಿಯರ್‌ ವಿಭಾಗದ ಸಿಂಗಲ್ಸ್‌ನಲ್ಲಿ ಟ್ರೋಫಿ ಗೆದ್ದಿದ್ದ ಇವರು ಶುಕ್ರವಾರ ಯೂತ್‌ ವಿಭಾಗದ ಸಿಂಗಲ್ಸ್‌ನಲ್ಲೂ ಚಾಂಪಿಯನ್‌ ಆದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಆಕಾಶ್‌ 11–8, 11–7, 13–11, 11–7ರಲ್ಲಿ ಪಿ.ಯಶವಂತ ಅವರನ್ನು ಪರಾಭವಗೊಳಿಸಿದರು.

ADVERTISEMENT

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ ಪಂದ್ಯಗಳಲ್ಲಿ ಯಶವಂತ್‌ 8–11, 11–6, 11–7, 11–6, 11–9ರಲ್ಲಿ ಸಮರ್ಥ್‌ ಕುರ್ಡಿಕೇರಿ ಎದುರೂ, ಆಕಾಶ್‌ 11–9, 7–11, 9–11, 11–7, 12–10, 12–10ರಲ್ಲಿ ಕೌಸ್ತುಭ್‌ ಮಿಲಿಂದ್‌ ಕುಲಕರ್ಣಿ ವಿರುದ್ಧವೂ ಗೆದ್ದಿದ್ದರು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಕರುಣಾ 11–6, 9–11, 11–6, 12–10, 11–6ರಲ್ಲಿ ಸುಶ್ಮಿತಾ ಆರ್‌.ಬಿದರಿ ಎದುರು ವಿಜಯಿಯಾದರು.

ನಾಲ್ಕರ ಘಟ್ಟದ ಹಣಾಹಣಿಗಳಲ್ಲಿ ಸುಶ್ಮಿತಾ 11–5, 11–5, 11–1, 11–4ರಲ್ಲಿ ಅದಿತಿ ಪಿ.ಜೋಶಿ ಎದುರೂ, ಕರುಣಾ 11–7, 11–8, 11–8, 11–13, 11–5ರಲ್ಲಿ ಕೌಮುದಿ ಪಟ್ನಾಕರ್‌ ಮೇಲೂ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.