ADVERTISEMENT

ಕೊಡವ ಹಾಕಿ: ಸಣ್ಣುವಂಡ ತಂಡಕ್ಕೆ ಜಯ

ಹಾಕಿ: ಪೊನ್ನಣ್ಣ ‘ಹ್ಯಾಟ್ರಿಕ್‌’ ಗೋಲಿನ ಸಾಧನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 19:05 IST
Last Updated 23 ಏಪ್ರಿಲ್ 2019, 19:05 IST

ವಿರಾಜಪೇಟೆ: ಸಣ್ಣುವಂಡ ಮತ್ತು ಕಡೆಮಾಡ ತಂಡಗಳು ಇಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗೆಲುವು ಪಡೆದು ಮುಂದಿನ ಹಂತ ಪ್ರವೇಶಿಸಿದವು.

ಕಾಕೋಟುಪರಂಬು ಮೈದಾನದಲ್ಲಿ ಹಾಕಿ ಕೂರ್ಗ್‌ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಸಣ್ಣುವಂಡ ತಂಡ 6-0 ಗೋಲುಗಳಿಂದ ಅಜ್ಜಿನಂಡ ತಂಡವನ್ನು ಸೋಲಿಸಿತು. ಸಣ್ಣುವಂಡ ತಂಡದ ಪರವಾಗಿ ಪೊನ್ನಣ್ಣ ‘ಹ್ಯಾಟ್ರಿಕ್‌’ ಗೋಲು ಗಳಿಸಿದರೆ, 11ರ ಹರೆಯದ ಆಟಗಾರ ಪೂವಯ್ಯ ಎರಡು ಗೋಲು ಗಳಿಸಿದರು. ಇನ್ನೊಂದು ಗೋಲನ್ನು ರಾಜೀವ್ ತಂದಿತ್ತರು.

ಕಡೆಮಾಡ ತಂಡ 2–0 ಗೋಲುಗಳಿಂದ ಪುಟ್ಟಿಚಂಡ ತಂಡದ ವಿರುದ್ಧ ಜಯ ಸಾಧಿಸಿತು. ಎರಡು ಗೋಲುಗಳನ್ನು ಗಳಿಸಿದ ಕುಶಾಲಪ್ಪ ಗೆಲುವಿನ ರೂವಾರಿ ಎನಿಸಿದರು.

ADVERTISEMENT

ಚಂಗುಲಂಡ ತಂಡ 2-0 ರಲ್ಲಿ ಬಾಚಿರ ತಂಡವನ್ನು ಮಣಿಸಿತು. ವಿಜೇತ ತಂಡದ ಪರವಾಗಿ ಕಿರಣ್ ಹಾಗೂ ಅಜಿತ್ ತಲಾ ಒಂದು ಗೋಲು ತಂದಿತ್ತರು. ಇತರ ಪಂದ್ಯಗಳಲ್ಲಿ ಕಾಳೇಂಗಡ ತಂಡ 5-0 ರಲ್ಲಿ ಪಾಲೆಕಂಡ ತಂಡದ ವಿರುದ್ಧ; ತೀತಮಾಡ 3-0 ರಲ್ಲಿ ಚರುಮಂದಂಡದ ವಿರುದ್ಧ; ಚಪ್ಪಂಡ ತಂಡ 4-1 ರಲ್ಲಿ ಕೂಪದಿರ ವಿರುದ್ಧ ಜಯ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.