ADVERTISEMENT

ಫಾರ್ಮುಲಾ ಒನ್‌: ಹ್ಯಾಮಿಲ್ಟನ್‌ಗೆ ಪ್ರಶಸ್ತಿ

ಏಜೆನ್ಸೀಸ್
Published 29 ಸೆಪ್ಟೆಂಬರ್ 2019, 20:06 IST
Last Updated 29 ಸೆಪ್ಟೆಂಬರ್ 2019, 20:06 IST
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಹ್ಯಾಮಿಲ್ಟನ್‌ –ರಾಯಿಟರ್ಸ್‌ ಚಿತ್ರ
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಹ್ಯಾಮಿಲ್ಟನ್‌ –ರಾಯಿಟರ್ಸ್‌ ಚಿತ್ರ   

ಸೋಚಿ: ಮರ್ಸಿಡೀಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌ ಅವರು ರಷ್ಯನ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಚಾಂಪಿಯನ್‌ ಆದರು.

ಭಾನುವಾರ ನಡೆದ ರೇಸ್‌ನಲ್ಲಿ ಬ್ರಿಟನ್‌ನ ಹ್ಯಾಮಿಲ್ಟನ್‌ 1 ಗಂಟೆ 33 ನಿಮಿಷ 38.992 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇದರೊಂದಿಗೆ ಈ ಋತುವಿನಲ್ಲಿ ಮೊದಲ ಪ್ರಶಸ್ತಿ ಗೆದ್ದರು.

ಮರ್ಸಿಡೀಸ್‌ ತಂಡದ ಮತ್ತೊಬ್ಬ ಚಾಲಕ ವಲಟೆರಿ ಬೊಟ್ಟಾಸ್‌, ರನ್ನರ್‌ ಅಪ್‌ ಆದರು. ಫೆರಾರಿ ತಂಡದ ಚಾರ್ಲಸ್‌ ಲೆಕ್ಲರ್ಕ್‌ ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು.

ADVERTISEMENT

ರೆಡ್‌ಬುಲ್‌ ತಂಡದ ಮ್ಯಾಕ್ಸ್‌ ವರ್ಸ್ಟಾಪನ್‌ ಮತ್ತು ಅಲೆಕ್ಸಾಂಡರ್‌ ಅಲ್ಬನ್‌ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಮೊದಲ ಲ್ಯಾಪ್‌ನಿಂದ ಸ್ಪರ್ಧೆ ಆರಂಭಿಸಿದ್ದ ಫೆರಾರಿ ತಂಡದ ಸೆಬಾಸ್ಟಿಯನ್‌ ವೆಟೆಲ್‌ ಆರಂಭದಲ್ಲಿ ಮುನ್ನಡೆ ಗಳಿಸಿದ್ದರು. ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅವರು ಅರ್ಧದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.