ADVERTISEMENT

ಕುಸ್ತಿಪಟು ದಾದು ಚೌಗುಲೆ ನಿಧನ

ಪಿಟಿಐ
Published 20 ಅಕ್ಟೋಬರ್ 2019, 18:55 IST
Last Updated 20 ಅಕ್ಟೋಬರ್ 2019, 18:55 IST

ಪುಣೆ: ಅಂತರರಾಷ್ಟ್ರೀಯ ಕುಸ್ತಿಪಟು ದಾದು ಚೌಗುಲೆ (73) ಭಾನುವಾರ ಕೋಲ್ಲಾಪುರದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

ಉಸಿರಾಟದ ತೊಂದರೆಯಿಂದ ಬಳಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಇಬ್ಬರು ಪುತ್ರರು ಇದ್ದಾರೆ.

1974ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿಪದಕ ಪಡೆದಿದ್ದರು. ಅವರಿಗೆ ಧ್ಯಾನಚಂದ್ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ರೈತ ಕುಟುಂಬದಲ್ಲಿ ಜನಿಸಿದ್ದ ಅವರು ಮೋತಿಬಾಗ್ ತಾಲೀಮಿನಲ್ಲಿ ಕುಸ್ತಿ ಕಲಿತಿದ್ದರು. ಹಿರಿಯ ಪೈಲ್ವಾನರಾದ ಗಣಪತರಾವ್ ಅಂಡಾಳಕರ್ ಮತ್ತು ಬಾಲು ಬೈರೆ ಅವರಿಂದ ತರಬೇತಿ ಪಡೆದಿದ್ದರು. 70ರ ದಶಕದಲ್ಲಿ ಮಹಾರಾಷ್ಟ್ರ ಕೇಸರಿ, ರುಸ್ತುಂ ಹಿಂದ್ ಕೇಸರಿ ಮತ್ತು ಮಹಾನ್ ಭಾರತ ಕೇಸರಿ ಪ್ರಶಸ್ರಿಗಳನ್ನು ಗೆದ್ದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.