ADVERTISEMENT

ಬ್ಯಾಸ್ಕೆಟ್‌ಬಾಲ್‌: ಜೈನ್‌ ತಂಡಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:51 IST
Last Updated 3 ಫೆಬ್ರುವರಿ 2019, 19:51 IST
ಮಲ್ಲೇಶ್ವರಂ ಕಪ್‌ಗಾಗಿ ನಡೆದ ರಾಜ್ಯಮಟ್ಟದ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕಿಯರ ವಿಭಾಗದ ಪ್ರಶಸ್ತಿ ಜಯಿಸಿದ ಜೈನ್‌ ವಿಶ್ವವಿದ್ಯಾಲಯ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. (ನಿಂತವರು, ಎಡದಿಂದ) ಚಾರುಲತಾ, ಸುಮಿತಾ, ಸರಾಯು, ಶ್ರೀನಿವಾಸನ್‌ (ಸಹಾಯಕ ಕೋಚ್‌), ಪುನೀತ್‌ (ಕೋಚ್‌), ರಾಜಪ್ರಿಯಾ, ಶಿನಿ ಮತ್ತು ಉಜ್ಜೈನಿ. (ಮಂಡಿಯೂರಿ ಕುಳಿತವರು) ಅಶ್ವಿನಿ, ಸಂಧ್ಯಾ, ಮೀನು, ಮಧುರ ವಾಣಿ, ಸುಪ್ರಿತಾ ಮತ್ತು ಪ್ರಿಯನಾಯಗಿ  –ಪ್ರಜಾವಾಣಿ ಚಿತ್ರ

ಬೆಂಗಳೂರು: ಜೈನ್‌ ವಿಶ್ವವಿದ್ಯಾಲಯದ ಬಾಲಕರ ಮತ್ತು ಬಾಲಕಿಯರ ತಂಡದವರು ಮಲ್ಲೇಶ್ವರಂ ಕಪ್‌ಗಾಗಿ ನಡೆದ ರಾಜ್ಯಮಟ್ಟದ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಬೀಗಲ್ಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಜೈನ್‌ ವಿಶ್ವವಿದ್ಯಾಲಯ 77–64 ಪಾಯಿಂಟ್ಸ್‌ನಿಂದ ಸೇಂಟ್‌ ಜೋಸೆಫ್ಸ್‌ ವಾಣಿಜ್ಯ ಕಾಲೇಜು ತಂಡವನ್ನು ಪರಾಭವಗೊಳಿಸಿತು.

ಜೈನ್‌ ತಂಡ ಮೊದಲಾರ್ಧದ ಆಟ ಮುಗಿದಾಗ 36–41ರಿಂದ ಹಿನ್ನಡೆ ಕಂಡಿತ್ತು. ದ್ವಿತೀಯಾರ್ಧದಲ್ಲಿ ಈ ತಂಡದವರು ಮಿಂಚಿನ ಸಾಮರ್ಥ್ಯ ತೋರಿದರು. ಮಧುರ ವಾಣಿ 24 ಪಾಯಿಂಟ್ಸ್‌ ಕಲೆಹಾಕಿ ಗಮನ ಸೆಳೆದರು. ಸೇಂಟ್‌ ಜೋಸೆಫ್ಸ್‌ ಪರ ಲೋಪಮುದ್ರಾ 25 ಪಾಯಿಂಟ್ಸ್‌ ಗಳಿಸಿದರು.

ADVERTISEMENT

ಮೂರನೇ ಸ್ಥಾನ ನಿರ್ಧರಿಸಲು ನಡೆದ ಹಣಾಹಣಿಯಲ್ಲಿ ನ್ಯೂ ಹೊರೈಜನ್‌ ಕಾಲೇಜು 42–25ರಿಂದ ಮಂಗಳೂರಿನ ನಿಟ್ಟೆ ತಂಡದ ಎದುರು ಗೆದ್ದಿತು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಜೈನ್‌ ತಂಡ 84–61ರಲ್ಲಿ ಸುರಾನ ಕಾಲೇಜು ತಂಡವನ್ನು ಸೋಲಿಸಿತು.

ಆರಂಭದಿಂದಲೇ ಮಿಂಚಿನ ಸಾಮರ್ಥ್ಯ ತೋರಿದ ಜೈನ್‌ ತಂಡ 60–33ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತೀಯಾರ್ಧದಲ್ಲೂ ಈ ತಂಡದವರು ಮೋಡಿ ಮಾಡಿದರು. ಅಭಿಷೇಕ್‌ ಗೌಡ 25 ಪಾಯಿಂಟ್ಸ್‌ ಕಲೆಹಾಕಿದರು. ಸುರಾನ ತಂಡದ ವಿನೋದ್‌ 15 ಪಾಯಿಂಟ್ಸ್‌ ಹೆಕ್ಕಿದರು.

ಮೂರನೇ ಸ್ಥಾನ ನಿರ್ಧರಿಸಲು ನಡೆದ ಪೈಪೋಟಿಯಲ್ಲಿ ಎಂ.ಎಸ್‌.ಆರ್‌.ಐ.ಟಿ 73–42 ಪಾಯಿಂಟ್ಸ್‌ನಿಂದ ಎಸ್‌.ಜೆ.ಸಿ.ಸಿ ತಂಡವನ್ನು ಪರಾಭವಗೊಳಿಸಿತು. ವಿಜಯೀ ತಂಡದ ದೇವ್‌ 19 ಪಾಯಿಂಟ್ಸ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.