ADVERTISEMENT

ದುಬೈ ಪ್ಯಾರಾ ಬ್ಯಾಡ್ಮಿಂಟನ್‌: ಎರಡು ಚಿನ್ನ ಗೆದ್ದ ಮನೀಷಾ

ಪ್ರಮೋದ್‌, ಮಾನಸಿ ಮಿಂಚು

ಪಿಟಿಐ
Published 29 ಮೇ 2022, 14:30 IST
Last Updated 29 ಮೇ 2022, 14:30 IST
ಪ್ರಮೋದ್ ಭಗತ್ ಮತ್ತು ಮನೀಷಾ ರಾಮದಾಸ್– ಟ್ವಿಟರ್‌ ಸಂಗ್ರಹ
ಪ್ರಮೋದ್ ಭಗತ್ ಮತ್ತು ಮನೀಷಾ ರಾಮದಾಸ್– ಟ್ವಿಟರ್‌ ಸಂಗ್ರಹ   

ದುಬೈ: ಭಾರತದ ಮನೀಷಾ ರಾಮದಾಸ್‌ ಇಲ್ಲಿ ನಡೆಯುತ್ತಿರುವ ಫಜ್ಜಾ ದುಬೈ ಪ್ಯಾರಾ ಬ್ಯಾಡ್ಮಿಂಟನ್‌ ಅಂತರಾಷ್ಟ್ರೀಯ ಟೂರ್ನಿಯಲ್ಲಿ ಎರಡು ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಪ್ರಮೋದ್‌ ಭಗತ್ ಮತ್ತು ಮಾನಸಿ ಜೋಷಿ ಅವರಿಗೂ ಚಿನ್ನ ಒಲಿಯಿತು.

ಭಾನುವಾರ ನಡೆದ ಮಹಿಳೆಯರ ವಿಭಾಗದ ಎಸ್‌ಯು5 ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಮನೀಷಾ 21–17, 21–11ರಿಂದ ಜಪಾನ್‌ನ ಅಕಿಕೊ ಸುಗಿನೊ ಅವರನ್ನು ಪರಾಭವಗೊಳಿಸಿದರು. ಮನದೀಪ್ ಕೌರ್ ಜೊತೆಗೂಡಿ ಡಬಲ್ಸ್ ಫೈನಲ್‌ನಲ್ಲಿ21-9, 21-13ರಿಂದ ಥಾಯ್ಲೆಂಡ್‌ನ ನಿಪದಾ ಸೆನ್‌ಸುಪಾ ಮತ್ತು ಚನಿದಾ ಶ್ರೀನಾವಕುಲ್ ಅವರನ್ನು ಮಣಿಸಿದರು.

ಪುರುಷರ ಎಸ್‌ಎಲ್‌3 ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ಯಾರಾಲಿಂಪಿಕ್ ಚಾಂಪಿಯನ್‌ ಪ್ರಮೋದ್‌, ಫೈನಲ್ ಪಂದ್ಯದಲ್ಲಿ19-21, 21-17, 21-17ರಿಂದ ಭಾರತದವರೇ ಆದ ನಿತೀಶ್ ಕುಮಾರ್ ಅವರಿಗೆ ಸೋಲುಣಿಸಿದರು.

ADVERTISEMENT

ಮಹಿಳಾ ಸಿಂಗಲ್ಸ್ ಎಸ್‌ಎಲ್‌3 ವಿಭಾಗದ ಫೈನಲ್‌ನಲ್ಲಿ ಮಾನಸಿ16-21, 24-22, 21-14ರಿಂದ ಮನದೀಪ್‌ ಕೌರ್‌ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.